Wednesday, May 1, 2013

ಬಡವರ ಬೆವರು, ಕಾರ್ಮಿಕರ ರಕ್ತದಿಂದ ಹುಟ್ಟಿದ್ದು ಜೆಡಿಎಸ್ ಪಕ್ಷ: ರಮೇಶ ನಾಮಕಲ್


ಕೊಪ್ಪಳ, ಮೇ.೦೧: ಬಡವರ ಬೆವರು, ಕಾರ್ಮಿಕರ ರಕ್ತದಿಂದ ಹುಟ್ಟಿದ್ದೇ ನಮ್ಮ ಜೆಡಿಎಸ್ ಪಕ್ಷ ಹಾಗಾಗೀ ನಮ್ಮ ಪಕ್ಷದ ನಾಯಕರಿಗೆ ಬಡವರ, ಶ್ರಮಿಕರ, ಕಾರ್ಮಿಕರ ನಾಡಿಮಿಡಿತ ಗೊತ್ತಿದ್ದು ಜನಪರ ಯೋಜನೆಗಳನ್ನು ಅವರು ಜಾರಿಗೊಳಿಸಲಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಯುವ ಘಟಕದ ಅಧ್ಯಕ್ಷ ರಮೇಶ ನಾಮಕಲ್ ಭವಿಷ್ಯ ನುಡಿದರು. 
ಅವರು ಬುಧವಾರ ತಾಲೂಕಿನ ಬಸ್ಸಾಪುರ ಗ್ರಾಮದಲ್ಲಿ ನೆರೆದ ಯುವಜನತೆಯನ್ನುದ್ದೇಶಿಸಿ ಮಾತನಾಡಿ, ನಮ್ಮ ಪಕ್ಷದಲ್ಲಿ ಧೀಮಂತ ನಾಯಕರಿದ್ದು ಅವರೇಲ್ಲಾ ಬಡತನ, ಶ್ರಮೀಕ ಕುಟುಂಬದಿಂದ ಬಂದಿದ್ದು, ಬಡವರ, ಶ್ರಮೀಕ ಕಾರ್ಮಿಕರ ಪರವಾದ ಯೋಜನೆಗಳನ್ನು ಹಮ್ಮಿಕೊಳ್ಳಲಿದ್ದಾರೆ. ಯಾವುದೇ ಪಕ್ಷದ ಪ್ರಣಾಳಿಕೆಯಲ್ಲು ಇಲ್ಲದ ಅಭಿವೃದ್ಧಪರ ಯೋಜನೆಗಳು ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿವೆ ಎಂಬುದು ಈಡೀ ರಾಜ್ಯಕ್ಕೆ ಗೊತ್ತಾಗಿದೆ. ಇದನ್ನು ಜನತೆ ಅರಿತು ಜನತೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್‌ರಿಗೆ ತಮ್ಮ ಅಮುಲ್ಯವಾದ ಮತ ನೀಡಿ ಪ್ರಚಂಡ ಬಹುಮತದಿಂದ ಜಯಶಾಲಿಗಳನ್ನಾಗಿಸಬೇಕೆಂದು ಅವರಿಲ್ಲಿ ಮನವಿ ಮಾಡಿದರು.
ನಂತರ ಮಾಜಿ ಜಿ.ಪಂ.ಸದಸ್ಯ ಮೋತಿಲಾಲ್ ಮಾತನಾಡಿ, ಕುಮಾರಣ್ಣ ಪ್ರಣಾಳಿಕೆಯಲ್ಲಿರುವ ಅಧಿಕಾರ ದೊರೆತ ೨೪ ಗಂಟೆಗಳಲ್ಲಿ ಎಲ್ಲಾ ಬಾಂಕ್‌ಗಳಲ್ಲಿನ ಸಾಲಮನ್ನಾ, ಮಾಶಾಸನ ಹೆಚ್ಚಳ, ಗರ್ಭೀಣಿಯರಿಗೆ ಐದು ಸಾವಿರ ಧನ ಸಹಾಯ ನೀಡುವುದು ಸೇರಿದಂತೆ ಅನೇಕ ಯೋಜನೆಗಳು ಜಾರಿಯಾಗಲಿವೆ. ಅದಕ್ಕಾಗಿ ಜನತೆ ಜ್ಯಾತ್ಯಾತೀತ ಜನತಾದಳಕ್ಕೆ ಬೆಂಬಲಿಸುವಂತೆ ಅವರಿಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೊಪ್ಪಳ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ವಿ.ಮಾಲಿ ಪಾಟೀಲ್, ಪಕ್ಷ ಮುಖಂಡರಾದ ಮಾಜಿ ಜಿ.ಪಂ. ಸದಸ್ಯ ಮೋತಿಲಾಲ್, ಜೆಡಿಎಸ್ ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ತಾಲೂಕ ಕಾರ್ಯದರ್ಶಿ ಶೇಖಪ್ಪ ಲಕ್ಷಾಣಿ, ಟಿ.ಟಿ. ಪಾಟೀಲ್, ಚಂದ್ರಶೇಖರಗೌಡ್ರ ವಿ. ಪಾಟೀಲ್, ಮುಖಂಡರಾದ ಎಂ.ಡಿ. ಹುಸೇನ್‌ಮಾಸ್ಟರ್, ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಹನುಮೇಶ ಕಡೆಮನಿ, ತಾಲೂಕಾಧ್ಯಕ್ಷ ರಮೇಶ ಬೇಳೂರು, ವಿರುಪಾಕ್ಷಗೌಡ, ಕಳಕನಗೌಡ ಹಲಗೇರಿ, ರಮೇಶ ಹದ್ಲಿ, ಸೋಮಶೇಖರ, ಮಲ್ಲಿಕಾರ್ಜುನ ಶೆಟ್ಟಿ, ದೇವಪ್ಪ, ಹೊಸ ಬಂಡಿಹರ್ಲಾಪುರ ಕಾಶಮ್ಮ ಹಿಟ್ನಾಳ, ಎಮ್.ರಮಣ, ಆದಂ ಶಫೀ, ಚಂದ್ರಮೋಹನ್  ಸೇರಿದಂತೆ ಇತರರು ಉಪಸ್ಥಿತರಿದ್ದರು. 

0 comments:

Post a Comment