Wednesday, April 3, 2013

ಪ್ರದೀಪಗೌಡರ ಹಿನ್ನೆಲೆ

ಹಿನ್ನೆಲೆ : ಕೊಪ್ಪಳ ಕ್ಷೇತ್ರದ ಮಾಜಿ ಶಾಸಕ ವಿರೂಪಾಕ್ಷಪ್ಪ ಮಾಲಿಪಾಟೀಲ್ ಹಾಗೂ ಮಾತೋಶ್ರೀ ಶ್ರೀಮತಿ ಅನ್ನ ಪೂರ್ಣದೇವಿಯವರ ಸುಪುತ್ರ ರಾದ ಪ್ರದೀಪಗೌಡರು ೪-೭-೧೯೯೭ರಲ್ಲಿ ತಾಯಿ ತವರೂರಾದ ಬಾಗಲಕೋಟದಲ್ಲಿ ಜನಿಸಿದ್ದಾರೆ.
ಪ್ರಾಥಮಿಕ ಶಿಕ್ಷಣ ೧ ರಿಂದ ೭ನೇ ತರಗತಿವರೆಗೆ ಗದಗಿನ ಲೊಯಲಾ ಕಾನ್ವೆಂಟ್ ಶಾಲೆ ಯಲ್ಲಿ, ಪ್ರೌಢಶಿಕ್ಷಣವನ್ನು ಸಂಡೂರಿನ ಎಸ್.ಆರ್.ಎಸ್ ರೆಸಿಡೆನ್ಸಿ ಹೈಸ್ಕೂಲಿನಲ್ಲಿ. ಪಿಯುಸಿ ಮತ್ತು ಡಿಪ್ಲೋಮಾ ಪದವಿ ಯನ್ನು ಗದಗಿನಲ್ಲಿ ಪೂರೈಸಿದ್ದಾರೆ.

ಸಾಮಾಜಿಕ ಚಟುವಟಿಕೆ : 
ವ್ಯವಸಾಯ ಕುಟುಂಬದ ಹಿನ್ನೆಲೆಯ ಗೌಡರು, ಸದಾ ಜನರ ಮಧ್ಯ  ಇದ್ದವರು. ಅಳವಂಡಿ, ಹಿರೇಸಿಂದೋಗಿ ಸೇರಿದಂತೆ ಇತರೆ ಭಾಗಗಳಲ್ಲಿ ಇವರ ಪ್ರಭಾವ ಇನ್ನೂ ಇದೆ. ಇವರ ತಂದೆ      ದಿ|ವಿರೂಪಾಕ್ಷಪ್ಪಗೌಡರು ೧೯೬೭-೭೧ರ ಅವಧಿಯಲ್ಲಿ ಶಾಸಕರಾಗಿ ದ್ದಾಗ ಜನರಪ ಕೆಲಸ ಮಾಡಿ ಹೆಸರು ಗಳಿಸಿದವರು, ಗ್ರಾಮೀಣ ಜನರ ಕಷ್ಟ -ಕಾರ್ಪಣ್ಯ ಗಳಿಗೆ ಸದಾ ಸ್ಪಂದಿಸಿದ್ದಾರೆ.
ಸೇವೆ : 
ಉಜ್ಜಯಿನಿಪೀಠಕ್ಕೆ ೧ ಎಕರೆ ಭೂಮಿಯನ್ನು ಕಲ್ಯಾಣ ಮಂಟಪಕ್ಕೆ ಭೂಮಿ ದಾನ, ಮಾಡಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದನೆ, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಆರ್ಥಿಕ ಸಹಾಯ, ಗುಡಿ-ಗುಂಡಾರಗಳ ನಿರ್ಮಾಣ, ಸಾಮೂಹಿಕ ಮದುವೆ ಮತ್ತಿತರ ಸಾಮಾಜಿಕ, ಧಾರ್ಮಿಕ ಕಾರ್ಯ ಕ್ರಮಗಳಿಗೆ ತಮ್ಮದೇ ಅಳಿಲು ಸೇವೆ ಸಲ್ಲಿಸಿದ್ದಾರೆ ಮತ್ತು ಸಲ್ಲಿಸುತ್ತಿದ್ದಾರೆ.
ಉದ್ಯೋಗಕ್ಕೆ ಸ್ಪಂದನೆ :
 ೧೯೮೭ರಲ್ಲಿ ಖಾಸಗಿ ಬಸ್‌ಗಳು ರಾಷ್ಟ್ರೀಕರಣಗೊಂಡಾಗ ಬಸ್ ಅವಲಂಬಿಸಿದ ಸುಮಾರು ೪೦ ಚಾಲಕರು ಮತ್ತು ನಿರ್ವಾಹಕರ ಕುಟುಂಬಗಳು ಇವರ ವಾಹನ ಗಳನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದರು. ಆದರೆ ಸರಕಾರಿ ಆದೇಶದಿಂದಾಗಿ ಬೀದಿ ಪಾಲಾಗುವ ಸಂದರ್ಭ ಎದುರಾ ದಾಗ ತಕ್ಷಣ ಸ್ಪಂದಿಸಿದ ಪ್ರದೀಪ ಗೌಡರ ತಂದೆ ಮಾಜಿ ಶಾಸಕ ವಿರೂಪಾಕ್ಷಪ್ಪಗೌಡರು ಕೆಸ್ಸಾರ್ಟ್‌ಸಿ ಯಲ್ಲಿ ೪೦ ಜನರನ್ನು ಉದ್ಯೋಗ ದೊರೆಕಿಸಿಕೊಟ್ಟು ಉದ್ಯೋU ದಾತರಾಗಿದ್ದಾರೆ. ಆ ನೌಕರ ಕುಟುಂಬಗಳು ಇವರ ಮನೆ ತನದ ಸೇವೆಯನ್ನೂ ಇಂದಿರೂ ಸ್ಮರಿಸುತ್ತಿವೆ.
ರಾಜಕೀಯ ಹಿನ್ನೆಲೆ : ಇವರದೇ ಆದ ಓಟ್ ಬ್ಯಾಂಕ್ ಇದ್ದು, ಕಳೆದ ಅವಧಿಯಲ್ಲಿ ಅಳವಂಡಿ ಜಿ.ಪಂ. ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ರಾಘವೇಂದ್ರ ಹಿಟ್ನಾಳರನ್ನು ಆಯ್ಕೆ ಮಾಡಿ ನಂತರ ಜಿ.ಪಂ. ಅಧ್ಯಕ್ಷ ಸ್ಥಾನಕ್ಕೇರಿಸಿದ ಕೀರ್ತಿ, ಅಲ್ಲದೇ ಬಸವರಾಜ ಹಕ್ಕಂಡಿಯವರು ತಾ.ಪಂ. ಸ್ಪರ್ಧಿಸಿದಾಗ ಅವರನ್ನು ಗೆಲ್ಲಿಸಿ ನಂತರ ತಾ.ಪಂ. ಅಧ್ಯಕ್ಷ ರನ್ನಾಗಿ ಮಾಡಿಸಿ ಪ್ರೋತ್ಸಾಹಿಸಿದ್ದು, ಅಲ್ಲದೇ ಕವಲೂರ ಗ್ರಾ.ಪಂ. ಚುನಾವಣೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆಯಲ್ಲಿ ಪಕ್ಷಾತೀತವಾಗಿ ಆಯ್ಕೆ ಮಾಡುತ್ತಿರುವುದನ್ನು ನೋಡಿದರೆ, ಪಾರದರ್ಶಕ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. 
ಹಿಂದೆ ಕಾಂಗ್ರೆಸ್‌ನಲ್ಲಿದ್ದಾಗ ೨೦೦೮ರಲ್ಲಿ ಎಂಎಲ್‌ಎ ಆಕಾಂಕ್ಷಿ ಯಾಗಿದ್ದೇ. ಆದರೆ ಹೈಕಮಾಂಡ್ ಹಾಲಿ ಎಂಎಲ್‌ಎಗೆ ಟಿಕೇಟ್ ಕೊಡಲು ನಿರ್ಧರಿಸಿತು ಹೀಗಾಗಿ ಇದಕ್ಕೆ ಬೇಸರವಾಗಿತ್ತು. ಇದೇ ಸಂದರ್ಭದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಆಫರ್ ಬಂದಿತ್ತು. ಆದರೆ ಪಕ್ಷ ತೊರೆಯುವುದು ಬೇಡ ಎಂಬ ಕಾರಣಕ್ಕೆ ಕಾಂಗ್ರೆಸ್ ಬಿಡಲಿಲ್ಲ. ಬೈ ಎಲೆಕ್ಷನ್‌ಗೆ ಕಾಂಗ್ರೆಸ್ ನಿಂದ ಟಿಕೇಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸಲು ರೆಡಿಯಾಗಿದ್ದೇ ಎನ್ನುತ್ತಾರೆ ಪ್ರದೀಪಗೌಡರು.

ಜೆಡಿಎಸ್‌ನೊಂದಿಗೆ ಉತ್ತಮ ಬಾಂಧವ್ಯ 
ಮಾಜಿ ಸಿ.ಎಂ. ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಕುಟುಂಬದೊಂದಿಗೆ ಮತ್ತು ನಮ್ಮ ಬಂಧುಗಳ ಜೊತೆ ಸಂಪರ್ಕವಿದೆ. ಆ ಪರಿಚಯವೇ ಜೆಡಿಎಸ್‌ಗೆ ಬರುವಂತೆ ಮತ್ತು ಅಳವಂಡಿ, ಸಿಂದೋಗಿ ಭಾಗದ ಜನ ಒತ್ತಾಯಕ್ಕೆ ಜೆಡಿಎಸ್‌ಗೆ ಸೇರಿ ಕ್ಷೇತ್ರದ ಅಭಿವೃದ್ಧಿ ಮಾಡುವ ಕನಸು ಕಾಣುತ್ತಿದ್ದಾರೆ.
ರಾಜಕೀಯ ಶುದ್ಧೀಕರಣಕ್ಕೆ ನಿಮ್ಮಂಥವರು ನಮಗೆ ಬೇಕೆಂದು ಸಾಲೋಣಿ ನಾಗಪ್ಪ, ವೆಂಕಟರಾವ್ ನಾಡಗೌಡ, ಬಸವರಾಜ ಪಾಟೀಲ್ ಅನ್ವರಿ ಮತ್ತಿತರರ ನಾಯಕರ ಮೇಲಿನ ವಿಶ್ವಾಸ  ಮತ್ತು ಬೆಂಬಲದಿಂದ ಪಕ್ಷಕ್ಕೆ ಸೇರಿದ್ದಾರೆ.
ಕೆರೆ ಒಡೆದ ಸುದ್ದಿ ತಿಳಿದ ಜಿಲ್ಲಾಮಟ್ಟದ ಅಧಿಕಾರಿಗಳು ಕವಲೂರಿಗೆ ಭೇಟಿ ನೀಡಿದಾಗ, ನಮ್ಮೂರ ಕೆಲಸ ಮಾಡಿ ಕೊಳ್ಳುತ್ತೇವೆ ಎಂದು ಉತ್ತರಿಸಿ ಕಳಿಸಿದ್ದರು. ಕೆರೆ ಒಡೆದ ಆ ಸಂದರ್ಭದಲ್ಲಿ ಇವರ ಅಜ್ಜಿಯವರು ನಿಧನರಾಗಿದ್ದರು. ಆದರೆ ಮನೆಯ ಅಜ್ಜಿಯ ಸಾವಿನ ದುಖಕ್ಕಿಂತಲೂ ಊರಿನ ಹಿತಮುಖ್ಯ ಎಂದು ಭಾವಿಸಿ ಕೆರೆ ಕೆಲಸ ಮುಗಿಸಿದ ಶ್ರೇಯಸ್ಸು ಇವರ ಕಾರ್ಯದಲ್ಲಿದೆ. ಅಂದಿನ ಮುಂದಾಲೋಚನೆಯ ಕ್ರಮವಾಗಿ ಮಾಡಿದ ಕೆಲಸವಿಂದು ಸುಗಮವಾಗಿ ಕವಲೂರ ಕೆರೆ ಗಟ್ಟಿಯಾಗಿದೆ. 

ಮಹಾನವಮಿ ಧಾರವಾಹಿ ಚಿತ್ರೀಕರಣಕ್ಕೆ ಅಭಯ  
ಮಾಜಿ ಸಂಸದ ಎಚ್.ಜಿ. ರಾಮುಲು ಕುಟುಂಬ ದ ಜೊತೆ ಒಳ್ಳೆ ಸಂಬಂಧವಿದೆ. ತಮ್ಮದು ಅವಿಭಕ್ತ ಕುಟುಂಬ ೨೫ ಜನರ ಕುಟುಂಬ ವಿದೆ. ಎಲ್ಲರನ್ನು ಪ್ರೀತಿ, ಅಭಿಮಾನದಿಂದ ಆಕರ್ಷಿಕಸುತ್ತಾರೆ, ಚುನಾವಣೆ, ರಾಜಕೀಯ, ಗಿಮಿಕ್‌ಗಿಂತಲೂ ತಂದೆ-ತಾಯಿಗಳು ಹಾಕಿಕೊಟ್ಟ ಮಾರ್ಗದಲ್ಲಿ ಗ್ರಾಮೀಣ ಜನಸೇವೆಯಲ್ಲಿ ತೊಡಗಿದ್ದಾರೆ. ಈ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಮಹಾನವಮಿ ಧಾರವಾಹಿ ಚಿತ್ರೀಕರಣ ನಡೆದಿದ್ದು, ಇವರ ಕವಲೂರ ಕಿಲ್ಲಾ ಮನೆಯಲ್ಲಿಯೇ ಎಂಬುದು ಮತ್ತೊಂದು ವಿಶೇಷ. ಚಿತ್ರೀಕರಣಕ್ಕೆ ಬೇಕಾದ ಮನೆಯ ಅಲಂಕಾರಕ್ಕಾಗಿ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ಚಿತ್ರೀಕರಣದ ಯಶಸ್ಸಿಗೆ ಸಹಕರಿಸಿದ್ದಾರೆ.
ಯಾವಾಗಲೂ ಚಿಂತನೆ, ಮಾತು ಮತ್ತು ಕೆಲಸದಲ್ಲಿ ಪರಿಶುದ್ಧತೆ ಇದ್ದಾಗ ಪ್ರತಿ ಯೊಂದರಲ್ಲಿಯೂ ಒಳಿತಾಗುತ್ತದೆ
 -ಮಹಾತ್ಮಾಗಾಂಧಿ
ಮೇಲ್ಕಂಡ ಉಕ್ತಿಗಳನ್ನು ತಮ್ಮ ಜೀವನದಲ್ಲಿ ಹುಟ್ಟಿ ನಿಂದಲೇ ಅಳವಡಿಸಿಕೊಂಡಂತೆ ಅವುಗಳನ್ನು ಅಕ್ಷರಶಃ ಪಾಲಿಸಿ ಕೊಂಡು ಬರುತ್ತಿರುವವರು ಪ್ರದೀಪಗೌಡರು.
ಕೊಪ್ಪಳ ಜಿಲ್ಲೆಯ ಜನತೆಗೆ ಪ್ರದೀಪಗೌಡ ಮಾಲಿ ಪಾಟೀಲ ರನ್ನು ಪರಿಚಯಿಸುವ ಅಗತ್ಯವಿಲ್ಲ. ಯಾಕೆಂದರೆ ದಿನದ ೨೪ ಗಂಟೆಯೂ ಸಾಮಾಜಿಕ ಮತ್ತು ರಾಜಕೀಯವನ್ನೇ ಉಸಿರಾಗಿಸಿ ಕೊಂಡಿರುವ ಜಿಲ್ಲೆಯ ಹಲವಾರು ಜನ ಯುವ ನಾಯಕರ ಪೈಕಿ ಇವರ ಹೆಸರು ಪ್ರತ್ಯೇಕ. ಅದಕ್ಕೆ ಇವರ ಸತತ ಹೋರಾಟದ ಫಲ.
೪೪ನೇ ವಸಂತದಲ್ಲಿ ಹೆಜ್ಜೆ ಹಾಕುತ್ತಿರುವ ಇವರು, ಬರುವ ದಿನಗಳಲ್ಲಿ ಹಲವಾರು ಕನಸು ಗಳನ್ನು ಹೊತ್ತುಕೊಂಡಿದ್ದಾರೆ. ಪ್ರದೀಪ್‌ಗೌಡರು ಐಷಾರಾಮಿ ಅನುಭವಿಸಿದಕ್ಕಿಂತಲೂ ಹೆಚ್ಚಾಗಿ ಹೋರಾಟ ನಡೆಸಿಕೊಂಡು ಜನಸೇವೆಯೇ ಜನಾರ್ಧನ ಸೇವೆ ಎಂಬ ತತ್ವನ್ನು ಪಾಲಿಸಿಕೊಂಡು ಬಂದವರು.
ಇಂದಿನ ರಾಜಕಾರಣ ವೆಂದರೆ ಸವಾಲಿನ ಹಾದಿಯೂ ಹೌದು. ಅದರಲ್ಲೂ ಗ್ರಾಮೀಣ ಹಾದಿ ತುಳಿದು ಜನಸೇವೆಯಲ್ಲಿ ಮುನ್ನಡೆದಿರುವುದು ಎಲ್ಲಕ್ಕಿಂತ ಮಿಗಿಲಾದ ಯಶೋಗಾಥೆ.
ಇದಕ್ಕೆ ಸಾಕ್ಷಿಯಾಗಿ ಪ್ರದೀಪ್ ವಿರುಪಾಕ್ಷಗೌಡ ಮಾಲಿಪಾಟೀಲ ಮೂಲತಃ ರೈತ ಕುಟುಂಬದಲ್ಲಿ ಜನಿಸಿದ ಇವರು ಪದವೀಧರರು, ರಾಜಕಾರಣದಲ್ಲಿ ಒಂದಿಷ್ಟು ಅನುಭವವಿದೆ. ಕೊಪ್ಪಳವೆಂಬ ಸ್ವಕ್ಷೇತ್ರದಲ್ಲಿ ತಮ್ಮದೇ ಆದ ವಿಶ್ವಾಸಗಳಿಸಿದ್ದಾರೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿ ದ್ದರಿಂದ ಜನರ ಆಶೀರ್ವಾದವೂ ಇವರಿಗಿದೆ. ಎಲ್ಲಕ್ಕಿಂತ ಮುಖ್ಯ ವಾಗಿ ಜನಸೇವೆ ಮಾಡಬೇಕೆಂಬ ಮಹದಾಸೆ ಇವರಲ್ಲಿದೆ.
ಪ್ರದೀಪಗೌಡರೇ ಹೇಳುವ ಪ್ರಕಾರ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ ಮೊದಲು ಅವುಗಳನ್ನು ಬಗೆ ಹರಿಸಬೇಕು. ಯಾವುದೇ ಅತ್ಯಾ ಧುನಿಕ ಯೋಜನೆಗಳು ಜಾರಿ ಗೊಂಡರೂ ಕ್ಷೇತ್ರದ ಅಭಿವೃದ್ಧಿ ಅಸಾಧ್ಯ. ಕ್ಷೇತ್ರದ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತಾವು ಪ್ರಯತ್ನಿಸುವ ಸಂಕಲ್ಪ ತೊಟ್ಟಿರುವುದಾಗಿ ಹೇಳುತ್ತಾರೆ.



ಕೊಪ್ಪಳಕ್ಕೆ ಜೆಡಿಎಸ್ ಶಾಸಕರಿಂದ ಅನುದಾನ ಪಡೆದ ಕೀರ್ತಿ 
 ಕೊಪ್ಪಳ ಕ್ಷೇತ್ರದಲ್ಲಿ ಅಭಿವೃದ್ಧಿ ಕುರಿತಂತೆ ಕುಮಾರಸ್ವಾಮಿ ಯವರ ಮಾರ್ಗದರ್ಶನದಲ್ಲಿ ಎಂಎಲ್‌ಸಿ ಎಚ್.ಸಿ.ನೀರಾವರಿ ಮತ್ತಿತರ ಅನುದಾನದಲ್ಲಿ ಸುಮಾರು ೨೦ ಲಕ್ಷ ರೂ,ಗಳನ್ನು ಸಿಂದೋಗಿ ಮತ್ತು ಅಳವಂಡಿ ಜಿ.ಪಂ. ಸರ್ಕಲ್‌ನಲ್ಲಿ ದೇವಸ್ಥಾನ, ಸಮುದಾಯ ಭವನ, ಶಾಲಾ-ಕಟ್ಟಡ, ಕುಡಿಯುವ ನೀರು ಮತ್ತಿತರರ ಕಾಮಗಾರಿಗಳಿಗೆ ಬಳಸಲು ಪ್ರದೀಪಗೌಡರು ಶ್ರಮಿಸಿದ್ದಾರೆ.
ಒಟ್ಟಾರೆ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಕವಲೂರ ಮಾಲಿಪಾಟೀಲರ ಮನೆತನದ ಕೊಡುಗೆ ಅಪಾರವಾಗಿದೆ. ಹಿರಿಯರು ಹಾಕಿಕೊಟ್ಟ ಮಾರ್ಗವನ್ನು ಅಕ್ಷರಶಃ ಪಾಲಿಸುತ್ತಿರುವ ಯುವಕರ ಕಣ್ಮಣಿ ಪ್ರದೀಪಗೌಡ ಮಾಲಿ ಪಾಟೀಲರ ಉತ್ಸಾಹಕ್ಕೆ ಸಾರ್ವಜನಿಕರು, ಮುಖಂಡರು, ಪ್ರಜ್ಞಾವಂತರು ಪ್ರೋತ್ಸಾಹಿಸಿ ಇವರು ಕಂಡ ಸಾರ್ವಜನಿಕ ಸೇವೆಯ ಕನಸನ್ನು ಸಾಕಾರಗೊಳಿಸಿದರೆ ಏನಾದರೂ ಹೊಸದನ್ನು ನಿರೀಕ್ಷಿಸಬಹುದು.
ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ರಾಜಕೀಯ ನಾಯಕರ ಜೊತೆ ನಿಕಟ ಸಂಪರ್ಕ ಹೊಂದಿದ ಪ್ರದೀಪಗೌಡರಿಗೆ ಬರುವ ದಿನಗಳಲ್ಲಿ ಜನಸೇವೆಗೆ ತಕ್ಕ ಫಲದೊರಕಲಿ ಎಂದು ಹಾರೈಸೋಣ.

0 comments:

Post a Comment