Friday, May 3, 2013

ಕಾಂಗ್ರೆಸ್ಸಿನಿಂದ ಜೆಡಿಎಸ್ ಸೇರ್ಪಡೆ


 ಇಲ್ಲಿನ ೧೨ಮತ್ತು ೧೩ ನೇ ವಾರ್ಡಿನಲ್ಲಿ ಶುಕ್ರವಾರದಂದು ನಡೆದ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ವಿ.ಮಾಲಿ ಪಾಟೀಲರ ಬಹಿರಂಗ ಪ್ರಚಾರದಲ್ಲಿ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಕಾರ್ಯದರ್ಶಿ ಹನುಮಂತಪ್ಪ ಮ್ಯಾಗಳಮನಿ, ಹಾಗೂ ಮುಸ್ಲೀಂ ಸಮಾಜದ ಹಿರಿಯ ಮುಖಂಡ ಡಾ.ಮಾಜೀದ್ ಖಾನ್ ಸೇರಿದಂತೆ ಅನೇಕರು ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.



ಕೋರವರ ಸಮಾಜಕ್ಕೆ ಸಾಮಾಜಿಕ ಭದ್ರತೆ: ಗೆಜ್ಜಿ ಭರವಸೆ
ಕೊಪ್ಪಳ, ಮೇ.೦೩: ಕ್ಷೇತ್ರದಲ್ಲಿ ತಾವೇಲ್ಲಾ ಆಶೀರ್ವದಿಸಿ ಜೆಡಿಎಸ್ ಪಕವನ್ನು ಅಧಿಕಾರಕ್ಕೆ ತಂದಲ್ಲಿ ಕೋರವರ ಸಮಾಜಕ್ಕೆ ಸಾಮಾಜಿಕ ಭದ್ರತೆ ಕಲ್ಪಿಸಿಕೋಡಲಾಗುವುದು ಎಂದು ಜೆಡಿಎಸ್ ಪಕ್ಷದ ಮುಖಂಡ ಶಂಕರ ಗೆಜ್ಜಿ ಭರವಸೆ ನೀಡಿದರು.
ಅವರು ಶುಕ್ರವಾರ ಇಲ್ಲಿನ ಕೋರವರ ಓಣಿಯಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ವಿ.ಮಾಲಿ ಪಾಟೀಲರ ಬಹಿರಂಗ ಪ್ರಚಾರದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಸಮಾಜದ ಜನತೆ ಈಗ ಸ್ವಾವಲಂಬನೆಯ ಬದುಕು ಸಾಗಿಸುತ್ತಿದ್ದು ಉತ್ತಮ ಸ್ಥಿತಿಯಲ್ಲಿದೆ.  ಆದರೆ ಸರಕಾರ ಯಾವುದೇ ಸೌಲಭ್ಯ ದೊರೆಯದಾಗಿದ್ದು ಮುಂದೆ ಎಲ್ಲಾ ಸೌಲಭ್ಯ ಸೇರಿದಂತೆ ವಿಶೇಷ ಆಧ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ವಿ.ಮಾಲಿ ಪಾಟೀಲ್, ಪಕ್ಷದ ತಾಲೂಕಾಧ್ಯಕ್ಷ ಅಂದಪ್ಪ ಮರೆಬಾಳ, ಜೆಡಿಎಸ್ ಯುವಘಟಕದ ಜಿಲ್ಲಾಧ್ಯಕ್ಷ ಸಿ.ಹೆಚ್.ರಮೇಶ, ತಾಲೂಕಾಧ್ಯಕ್ಷ ಮಹಿಮೂದ್ ಹುಸೇನಿ, ಪಕ್ಷದ ಮುಖಂಡರಾದ ಎಂ.ಡಿ. ಹುಸೇನ್‌ಮಾಸ್ಟರ್, ಶಂಕರ ಗೆಜ್ಜಿ, ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಹನುಮೇಶ ಕಡೆಮನಿ, ಚನ್ನಪ್ಪ ಟೆಂಗಿನಕಾಯಿ ಸೇರಿದಂತೆ ಅನೇಕ ಮುಖಂಡರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. 

Thursday, May 2, 2013

ಬಿಎಸ್‌ಆರ್ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ



ಕುಮಾರಸ್ವಾಮಿಯವರ ತತ್ವ ಸಿದ್ಧಾಂತ ಮೆಚ್ಚಿ ಜೆಡಿಎಸ್‌ಗೆ ಸೇರ್ಪಡೆಯಾದೆ: ಶೀಲ್ಪಾ ಸುಗಮದವರ
ಕೊಪ್ಪಳ, ಮೇ.೦೨: ಜೆಡಿಎಸ್ ಪಕ್ಷದ ತತ್ವ ಸಿದ್ದಾಂತಗಳು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಜನಪರ ಕಾರ್ಯ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಮೆಚ್ಚಿ ಇಂದು ನಮ್ಮ ಬೆಂಬಲಿಗರೊಂದಿಗೆ ಬಿಎಸ್‌ಆರ್ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿರುವದಾಗಿ ಶೀಲ್ಪಾ ಬಾಲಚಂದ್ರ ಸುಗಮದವರ ಹೇಳಿದರು.
ಅವರು ಗುರುವಾರ ನಗರದ ಒಂದನೇ ವಾಡಿನಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್ ರವರ ಬಹಿರಂಗ ಪ್ರಚಾರದಲ್ಲಿ ಅಭ್ಯರ್ಥಿಯ ಸಮ್ಮುಖದಲ್ಲಿ ಅಧಿಕೃತವಾಗಿ ಪಕ್ಷ ಸೇರ್ಪಡೆಗೊಂಡರು. ಶೀಲ್ಪಾ ಸುಗಮದವರ ಕಳೆದ ನಗರಸಭೆ ಚುನಾವಣೆಯಲ್ಲಿ ಒಂದನೇ ವಾರ್ಡಿನಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದು ಪರಾಭವಗೊಂಡಿದ್ದರು. ಜೆಡಿಎಸ್ ಸೇರ್ಪಡೆ ನಂತರ ಅವರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ನಮ್ಮೇಲ್ಲಾ ಬೆಂಬಲಿಗರು ಹಾಗೂ ವಾರ್ಡಿನ ಸಮಸ್ಥ ಜನತೆ ಈ ಬಾರಿ ಜೆಡಿಎಸ್ ಅಭ್ಯರ್ಥಿ ಕವಲೂರುಗೌಡ್ರಗೆ ಬೆಂಬಲಿಸಿ ಅಭಿವೃದ್ಧಿ ಕಾರ್ಯಗಳನ್ನು ನಿಂತು ನೋಡಿರಿ. ಕ್ಷೇತ್ರದ ಅಭಿವೃದ್ಧಿ ಎಂದರೇ ಕವಲೂರಗೌಡ್ರ ಎಂಬಂತೆ ಮಾಡಿ ತೋರಲಿದ್ದಾರೆ ಎಂದು ಅವರಿಲ್ಲಿ ತಿಳಿಸಿದರು. 
ಇದೇ ವೇಳೆ ಜೆಡಿಎಸ್ ಹಿರಿಯ ಮುಖಂಡ ಎಂ.ಡಿ. ಹುಸೇ


ನ್‌ಮಾಸ್ಟರ್ ಮಾತನಾಡಿ, ಜೆಡಿಎಸ್ ಪಕ್ಷಕ್ಕೆ ತನ್ನದೇ ಆದ ಸೈದ್ಯಾಂತೀಕ ತತ್ವ ಸಿದ್ಧಾಂತಗಳಿವೆ. ಅದೇ ರೀತಿ ನಮ್ಮ ಪಕ್ಷದ ನಾಯಕರು ಮಹತ್ವ ಪೂರ್ಣ ಯೋಜನೆ ಹಾಗೂ ಉದ್ದೇಶಗಳು ಅಷ್ಟೋಂದು ಫಲಪ್ರದವಾಗಿರುತ್ತವೆ. ಅದೇ ರೀತಿ ನಮ್ಮ ಅಭ್ಯರ್ಥಿ ಕವಲೂರು ಗೌಡ್ರ ಅತ್ಯಂತ ಸರಳ, ಸಜ್ಜನಿಕೆಯ, ನಿಷ್ಟೆ, ಪ್ರಾಮಾಣಿಕ ವ್ಯಕ್ತಿಯಾಗಿದ್ದು ಜನತೆ ಇವರ ಬಗ್ಗೆ ಅರಿತು ಬಹುಮತ ನೀಡುವಂತೆ ಅವರಿಲ್ಲಿ ಮನವಿ ಮಾಡಿದರು. 

ನಗರದಲ್ಲಿ ಪ್ರಚಾರ : 
ಇಂದು ನಗರದ ಒಂದನೇ ವಾರ್ಡಿನ ಶಿರಸಪ್ಪಯ್ಯನ ಮಠದಲ್ಲಿ ಅಭ್ಯರ್ಥಿ ಪ್ರದೀಪಗೌಡ ವಿ.ಮಾಲಿ ಪಾಟೀಲ್ ವಿಶೇಷ ಪೂಜೆ ನೆರವೇರಿಸಿ ಒಂದನೇ ವಾರ್ಡಿನಿಂದ ನಗರದ ಬಹಿರಂಗ ಪ್ರಚಾರಕ್ಕೆ ಚಾಲನೆ ನೀಡಿದರು. 
ಈ ಸಂದರ್ಭದಲ್ಲಿ ಕೊಪ್ಪಳ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ವಿ.ಮಾಲಿ ಪಾಟೀಲ್,ಜೆಡಿಎಸ್ ಯುವಘಟಕದ ಜಿಲ್ಲಾಧ್ಯಕ್ಷ ಸಿ.ಹೆಚ್.ರಮೇಶ, ಪಕ್ಷ ಮುಖಂಡರಾದ ಮಾಜಿ ಜಿ.ಪಂ. ಸದಸ್ಯ ಮೋತಿಲಾಲ್, ಜೆಡಿಎಸ್ ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಟಿ.ಟಿ. ಪಾಟೀಲ್, ಚಂದ್ರಶೇಖರಗೌಡ್ರ ವಿ. ಪಾಟೀಲ್, ಮುಖಂಡರಾದ ಎಂ.ಡಿ. ಹುಸೇನ್‌ಮಾಸ್ಟರ್, ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಹನುಮೇಶ ಕಡೆಮನಿ, ಚನ್ನಪ್ಪ ಟೆಂಗಿನಕಾಯಿ ಸೇರಿದಂತೆ ಅನೇಕ ಮುಖಂಡರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

Wednesday, May 1, 2013

ಬಡವರ ಬೆವರು, ಕಾರ್ಮಿಕರ ರಕ್ತದಿಂದ ಹುಟ್ಟಿದ್ದು ಜೆಡಿಎಸ್ ಪಕ್ಷ: ರಮೇಶ ನಾಮಕಲ್


ಕೊಪ್ಪಳ, ಮೇ.೦೧: ಬಡವರ ಬೆವರು, ಕಾರ್ಮಿಕರ ರಕ್ತದಿಂದ ಹುಟ್ಟಿದ್ದೇ ನಮ್ಮ ಜೆಡಿಎಸ್ ಪಕ್ಷ ಹಾಗಾಗೀ ನಮ್ಮ ಪಕ್ಷದ ನಾಯಕರಿಗೆ ಬಡವರ, ಶ್ರಮಿಕರ, ಕಾರ್ಮಿಕರ ನಾಡಿಮಿಡಿತ ಗೊತ್ತಿದ್ದು ಜನಪರ ಯೋಜನೆಗಳನ್ನು ಅವರು ಜಾರಿಗೊಳಿಸಲಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಯುವ ಘಟಕದ ಅಧ್ಯಕ್ಷ ರಮೇಶ ನಾಮಕಲ್ ಭವಿಷ್ಯ ನುಡಿದರು. 
ಅವರು ಬುಧವಾರ ತಾಲೂಕಿನ ಬಸ್ಸಾಪುರ ಗ್ರಾಮದಲ್ಲಿ ನೆರೆದ ಯುವಜನತೆಯನ್ನುದ್ದೇಶಿಸಿ ಮಾತನಾಡಿ, ನಮ್ಮ ಪಕ್ಷದಲ್ಲಿ ಧೀಮಂತ ನಾಯಕರಿದ್ದು ಅವರೇಲ್ಲಾ ಬಡತನ, ಶ್ರಮೀಕ ಕುಟುಂಬದಿಂದ ಬಂದಿದ್ದು, ಬಡವರ, ಶ್ರಮೀಕ ಕಾರ್ಮಿಕರ ಪರವಾದ ಯೋಜನೆಗಳನ್ನು ಹಮ್ಮಿಕೊಳ್ಳಲಿದ್ದಾರೆ. ಯಾವುದೇ ಪಕ್ಷದ ಪ್ರಣಾಳಿಕೆಯಲ್ಲು ಇಲ್ಲದ ಅಭಿವೃದ್ಧಪರ ಯೋಜನೆಗಳು ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿವೆ ಎಂಬುದು ಈಡೀ ರಾಜ್ಯಕ್ಕೆ ಗೊತ್ತಾಗಿದೆ. ಇದನ್ನು ಜನತೆ ಅರಿತು ಜನತೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್‌ರಿಗೆ ತಮ್ಮ ಅಮುಲ್ಯವಾದ ಮತ ನೀಡಿ ಪ್ರಚಂಡ ಬಹುಮತದಿಂದ ಜಯಶಾಲಿಗಳನ್ನಾಗಿಸಬೇಕೆಂದು ಅವರಿಲ್ಲಿ ಮನವಿ ಮಾಡಿದರು.
ನಂತರ ಮಾಜಿ ಜಿ.ಪಂ.ಸದಸ್ಯ ಮೋತಿಲಾಲ್ ಮಾತನಾಡಿ, ಕುಮಾರಣ್ಣ ಪ್ರಣಾಳಿಕೆಯಲ್ಲಿರುವ ಅಧಿಕಾರ ದೊರೆತ ೨೪ ಗಂಟೆಗಳಲ್ಲಿ ಎಲ್ಲಾ ಬಾಂಕ್‌ಗಳಲ್ಲಿನ ಸಾಲಮನ್ನಾ, ಮಾಶಾಸನ ಹೆಚ್ಚಳ, ಗರ್ಭೀಣಿಯರಿಗೆ ಐದು ಸಾವಿರ ಧನ ಸಹಾಯ ನೀಡುವುದು ಸೇರಿದಂತೆ ಅನೇಕ ಯೋಜನೆಗಳು ಜಾರಿಯಾಗಲಿವೆ. ಅದಕ್ಕಾಗಿ ಜನತೆ ಜ್ಯಾತ್ಯಾತೀತ ಜನತಾದಳಕ್ಕೆ ಬೆಂಬಲಿಸುವಂತೆ ಅವರಿಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೊಪ್ಪಳ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ವಿ.ಮಾಲಿ ಪಾಟೀಲ್, ಪಕ್ಷ ಮುಖಂಡರಾದ ಮಾಜಿ ಜಿ.ಪಂ. ಸದಸ್ಯ ಮೋತಿಲಾಲ್, ಜೆಡಿಎಸ್ ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ತಾಲೂಕ ಕಾರ್ಯದರ್ಶಿ ಶೇಖಪ್ಪ ಲಕ್ಷಾಣಿ, ಟಿ.ಟಿ. ಪಾಟೀಲ್, ಚಂದ್ರಶೇಖರಗೌಡ್ರ ವಿ. ಪಾಟೀಲ್, ಮುಖಂಡರಾದ ಎಂ.ಡಿ. ಹುಸೇನ್‌ಮಾಸ್ಟರ್, ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಹನುಮೇಶ ಕಡೆಮನಿ, ತಾಲೂಕಾಧ್ಯಕ್ಷ ರಮೇಶ ಬೇಳೂರು, ವಿರುಪಾಕ್ಷಗೌಡ, ಕಳಕನಗೌಡ ಹಲಗೇರಿ, ರಮೇಶ ಹದ್ಲಿ, ಸೋಮಶೇಖರ, ಮಲ್ಲಿಕಾರ್ಜುನ ಶೆಟ್ಟಿ, ದೇವಪ್ಪ, ಹೊಸ ಬಂಡಿಹರ್ಲಾಪುರ ಕಾಶಮ್ಮ ಹಿಟ್ನಾಳ, ಎಮ್.ರಮಣ, ಆದಂ ಶಫೀ, ಚಂದ್ರಮೋಹನ್  ಸೇರಿದಂತೆ ಇತರರು ಉಪಸ್ಥಿತರಿದ್ದರು. 

ಜೆಡಿಎಸ್‌ಗೆ ಜನಮತ ದೊರೆತಿದ್ದು ಗೌಡ್ರ ಗೆಲುವು ನಿಶ್ಚಿತ: ರಮೇಶ ನಾಮಕಲ್



ಕೊಪ್ಪಳ, ಮೇ.೦೧: ನಮ್ಮ ಜೆಡಿಎಸ್ ಅಭ್ಯರ್ಥಿ ಕವಲೂರ ಗೌಡ್ರಗೆ ಕ್ಷೇತ್ರದ ತುಂಬೆಲ್ಲಾ ಜನಮತ ದೊರೆತಿದ್ದು ಗೌಡ್ರ ಗೆಲುವು ಖಚಿತವೆಂದು ಜಿಲ್ಲಾ ಜೆಡಿಎಸ್ ಯುವ ಘಟಕದ ಅಧ್ಯಕ್ಷ ರಮೇಶ ನಾಮಕಲ್ ಭವಿಷ್ಯ ನುಡಿದರು. 
ಅವರು ಬುಧವಾರ ತಾಲೂಕಿನ ಕಾಸನಕಂಡಿ ಗ್ರಾಮದಲ್ಲಿ ನೆರೆದ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಪ್ರದೀಪಗೌಡ್ರ ಸರಳ ಸಜ್ಜನಿಕೆಗೆ ಕ್ಷೇತ್ರದಲ್ಲಿ ಉತ್ತಮ ಅನುಕಂಪ ಹಾಗೂ ಅವರ ಕಿಲ್ಲೆದರ್ ಮನೆತನ ಕುರಿತು ಜನತೆಗೆ ಗೊತ್ತಿದೆ ಇದರಿಂದ ಕ್ಷೇತ್ರದಲ್ಲಿ ನಿರೀಕ್ಷೆಗೂ ಮಿರಿ ಬಹುಮತ ಪಡೆಯುವ ಮೂಲಕ ಜಯ ಸಾಧಿಸಲಿದೆ. ಕುಮಾರಣ್ಣ ಪ್ರಣಾಳಿಕೆಯಲ್ಲಿರುವ ಅಧಿಕಾರ ದೊರೆತ ೨೪ ಗಂಟೆಗಳಲ್ಲಿ ಎಲ್ಲಾ ಬಾಂಕ್‌ಗಳಲ್ಲಿನ ಸಾಲಮನ್ನಾ ಸೇರಿದಂತೆ, ಮಾಶಾಸನ ಹೆಚ್ಚಳ, ಗರ್ಭೀಣಿಯರಿಗೆ ಐದು ಸಾವಿರ ಧನ ಸಹಾಯ ನೀಡುವುದು ಸೇರಿದಂತೆ ಅನೇಕ ಯೋಜನೆಗಳು ಜಾರಿಯಾಗಲಿ ಅದಕ್ಕಾಗಿ ಜನತೆ ಜ್ಯಾತ್ಯಾತೀತ ಜನತಾದಳಕ್ಕೆ ಬಾರಿ ಪ್ರಮಾಣದಲ್ಲಿ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಜೆಡಿಎಸ್ ತಾಲೂಕ ಕಾರ್ಯದರ್ಶಿ ಶೇಖಣ್ಣ ಲಕ್ಷಾಣಿ ಮಾತನಾಡಿ, ಕುಮಾರಸ್ವಾಮಿಯವರ ಜನಪರ ಕಾರ್ಯಗಳನ್ನು ನಮ್ಮ ಗೌಡರು ತಮ್ಮ ಮನೆ ಮನೆ ಬಾಗಿಲಿಗೆ ತಂದು ತಲುಪಿಸಲಿದ್ದಾರೆ ಎಂದು ತಿಳಿಸಿದರು.
 ಈ ಸಂದರ್ಭದಲ್ಲಿ ಕೊಪ್ಪಳ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ವಿ.ಮಾಲಿ ಪಾಟೀಲ್, ಪಕ್ಷ ಮುಖಂಡರಾದ ಮಾಜಿ ಜಿ.ಪಂ. ಸದಸ್ಯ ಮೋತಿಲಾಲ್, ಜೆಡಿಎಸ್ ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಟಿ.ಟಿ. ಪಾಟೀಲ್, ಚಂದ್ರಶೇಖರಗೌಡ್ರ ವಿ. ಪಾಟೀಲ್, ಮುಖಂಡರಾದ ಎಂ.ಡಿ. ಹುಸೇನ್‌ಮಾಸ್ಟರ್, ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಹನುಮೇಶ ಕಡೆಮನಿ, ತಾಲೂಕಾಧ್ಯಕ್ಷ ರಮೇಶ ಬೇಳೂರು, ವಿರುಪಾಕ್ಷಗೌಡ, ಕಳಕನಗೌಡ ಹಲಗೇರಿ, ರಮೇಶ ಹದ್ಲಿ, ಸೋಮಶೇಖರ, ಮಲ್ಲಿಕಾರ್ಜುನ ಶೆಟ್ಟಿ, ಸೋಮಶೇಖರ, ದೇವಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tuesday, April 30, 2013

ಜೆಡಿಎಸ್‌ನ ಬೃಹತ್ ರೋಡ್ ಶೋ



ತಾಲೂಕಿನ ಮುನಿರಾಬಾದ್ ಗ್ರಾಮದ ಜಾಮೀಯಾ ಮಸೀದಿ ಮುಖ್ಯರಸ್ತೆಯಲ್ಲಿ ಮಂಗಳವಾರ ಜೆಡಿಎಸ್‌ನ ಬೃಹತ್ ರೋಡ್ ಶೋ ಮೂಲಕ ಬಹಿರಂಗ ಪ್ರಚಾರ ನಡೆಸಲಾಯಿತು.
ಕೊಪ್ಪಳ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ವಿ.ಮಾಲಿ ಪಾಟೀಲ್, ಪಕ್ಷ ಮುಖಂಡರಾದ ಮಾಜಿ ಜಿ.ಪಂ. ಸದಸ್ಯ ಮೋತಿಲಾಲ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಿ.ಹೆಚ್. ರಮೇಶ, ಜೆಡಿಎಸ್ ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಟಿ.ಟಿ. ಪಾಟೀಲ್, ಮುಖಂಡರಾದ ಎಂ.ಡಿ. ಹುಸೇನ್‌ಮಾಸ್ಟರ್, ಎಸ್.
ಸಿ. ಘಟಕದ ಜಿಲ್ಲಾಧ್ಯಕ್ಷ ಹನುಮೇಶ ಕಡೆಮನಿ, ತಾಲೂಕಾಧ್ಯಕ್ಷ ರಮೇಶ ಬೇಳೂರು, ರಮೇಶ ಹದ್ಲಿ, ಸ್ಥಳೀಯ ಮುಖಂಡರಾದ ಪ್ರದೀಪಕುಮಾರ, ಸುರೇಂದ್ರ, ನರಸಾರೆಡ್ಡಿ, ಮುನಿರ್ ಹೈಮದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಲೂಟಿ, ಭ್ರಷ್ಟಾಚಾರವೇ ಕಾಂಗ್ರೆಸ್ ಮತ್ತು ಬಿಜೆಪಿ ಕೊಡುಗೆ :ಮೋತಿಲಾಲ್


ಕೊಪ್ಪಳ, ಏ.೩೦: ಕೇಂದ್ರದಲ್ಲಿ ಕಾಂಗ್ರೆಸ್ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಬಾರಿ ಭ್ರಷ್ಟಾಚಾರ ಲೂಟಿ ನಡೆಸಿರುವುದೇ ಜನತೆಗೆ ನೀಡಿದ ಕೊಡುಗೆಯಾಗಿದೆ ಎಂದು ಮಾಜಿ ಜಿ.ಪಂ. ಸದಸ್ಯ ಮೋತಿಲಾಲ್ ಕಿಡಿಕಾರಿದರು.
ಅವರು ಮಂಗಳವಾರ ತಾಲೂಕಿನ ಹೀರೆ ಕಾಸನಕಂಡಿ ಗ್ರಾಮದ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಇಗಾಗಲೇ ಹಲವು ಸಚಿವರು, ಶಾಸಕರು ಜೈಲಿಗೆ ಹೋಗಿಬಂದಿದ್ದಾರೆ ಅದೇ ರೀತಿ ಇನ್ನು ಕೋಟ್ ಕಟಕಟೆಯ
ಲ್ಲಿ ನಿಂತವರು ಇದ್ದಾರೆ. ಜನತೆ ಇನ್ನಾದರು ಎಚ್ಛೆತ್ತು ಯೋಗ್ಯ ಅಭ್ಯರ್ಥಿ ಅದು ನಮ್ಮ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ಮಾಲಿ ಪಾಟೀಲ್ ಕವಲೂರಗೌಡ್ರ ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದು ಅವರಿಗೆ ತಮ್ಮ ಮಿಸಲಾಗಿರಲಿ ಎಂದು ಅವರಿಲ್ಲಿ ಮನವಿ ನೀಡಿದರು.
ನಂತರ ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಹನುಮೇಶ ಕಡೆಮನಿ ಮಾತನಾಡಿ, ಜನತೆ ಜಾತಿ ಭೇದ ಮಾಡದೇ ಜ್ಯಾತ್ಯಾತೀತವಾಗಿ ಜೆಡಿಎಸ್‌ಗೆ ಬೆಂಬಲಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷ ಮುಖಂಡರಾದ ಜೆಡಿಎಸ್ ಯುವ ಘಟಕ ಜಿಲ್ಲಾಧ್ಯಕ್ಷ ಸಿ.ಹೆಚ್. ರಮೇಶ, ತಾಲೂಕ ಘಟಕದ ಕಾರ್ಯದರ್ಶಿ ಕಳಕನಗೌಡ ಹಲಗೇರಿ, ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಟಿ.ಟಿ. ಪಾಟೀಲ್, ಮುಖಂಡರಾದ ಎಂ.ಡಿ. ಹುಸೇನ್‌ಮಾಸ್ಟರ್, ಜೆಡಿಎಸ್ ತಾಲೂಕ ಕಾರ್ಯದರ್ಶಿ ಶೇಖಪ್ಪ ಲಕ್ಷಾಣಿ, ಕರವೇ ತಾಲೂಕಾಧ್ಯಕ್ಷ ವಿಜಯಕುಮಾರ,  ಪಕ್ಷದ ಎಸ್‌ಸಿ ಘಟಕದ ತಾಲೂಕಾಧ್ಯಕ್ಷ ರಮೇಶ ಬೇಳೂರು, ವಿರುಪಾಕ್ಷಗೌಡ, ರಮೇಶ ಹದ್ಲಿ, ಸೋಮಶೇಖರ, ದೇವಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ:ವಿಜಯಕುಮಾರ



ಕೊಪ್ಪಳ, ಏ.೩೦: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತೇ ಈ ಬಾರಿ ರಾಜ್ಯದ ಮುಖ್ಯಮಂತ್ರಿಯಾಲಿದ್ದಾರೆ ಎಂದು ಕರವೇ ತಾಲೂಕಾಧ್ಯಕ್ಷ ವಿಜಯಕುಮಾರ ಭವಿಷ್ಯ ನುಡಿದರು.
ಅವರು ಮಂಗಳವಾರ ತಾಲೂಕಿನ ಹೀರೆ ಕಾಸನಕಂಡಿ ಗ್ರಾಮದ ಹರಿಜನ ಕೇರಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ನಮ್ಮ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ಮಾಲಿ ಪಾಟೀಲ್ ಕವಲೂರಗೌಡ್ರ ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದು ನಮ್ಮ ಸಮಾಜದ ಜನತೆ ಸಾಕಷ್ಟು ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ. ನಮ್ಮೆಲ್ಲಾ ಸಮಾಜದ ಹಾಗೂ ಸಂಬಂಧಿತರ ಮತಗಳು ಜೆಡಿಎಸ್ ಪಕ್ಷಕ್ಕೆ ಮಿಸಲಾಗಿರಲಿ ಎಂದು ಅವರಿಲ್ಲಿ ಕರೆ ನೀಡಿದರು. 
ಕುಮಾರಸ್ವಾಮಿಯವರ ಜನಪರ ಕಾರ್ಯಗಳನ್ನು ಗೌಡರು ನಮ್ಮ ಮನೆ ಬಾಗಿಲಿಗೆ ತಂದು ತಲುಪಿಸಲಿದ್ದಾರೆ. 
ಇದೇ ವೇಳೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್ ಮಾತನಾಡಿ, ಜೆಡಿಎಸ್ ಪಕ್ಷದಲ್ಲಿ ಎಲ್ಲಾ ಸಮಾಜದರಿಗೆ ಪ್ರೋತ್ಸಾಹ ಹಾಗೂ ಸೂಕ್ತ ಸ್ಥಾನಮಾನ ನೀಡಿದೆ ಅದರಂತೆ ಮುಂದೆಯೂ ಪಕ್ಷದ ನಿಷ್ಠಾವಂತರಿಗೆ ಸೂಕ್ತ ಸ್ಥಾನಮಾನ ನೀಡಲಿದೆ ಎಂದರು.
ಸೇರ್ಪಡೆ: ಗುಡದಪ್ಪ, ಬಸವರಾಜ, ನಿಂಗಪ್ಪ, ಸಣ್ಣ ನಿಂಗಪ್ಪ, ಮಂಜುನಾಥ, ರೇವಪ್ಪ, ಭೀಮಪ್ಪ, ಪಕೀರಪ್ಪ, ಜುಂಜಪ್ಪ, ಸಿದ್ದಪ್ಪ ಚೇರಮನ್ ಸೇರಿದಂತೆ ಅನೇಕ ದಲಿತ ಮುಖಂಡರು ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
 ಈ ಸಂದರ್ಭದಲ್ಲಿ ಪಕ್ಷ ಮುಖಂಡರಾದ ಮಾಜಿ ಜಿ.ಪಂ. ಸದಸ್ಯ ಮೋತಿಲಾಲ್, ಜೆಡಿಎಸ್ ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಟಿ.ಟಿ. ಪಾಟೀಲ್, ಮುಖಂಡರಾದ ಎಂ.ಡಿ. ಹುಸೇನ್‌ಮಾಸ್ಟರ್, ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಹನುಮೇಶ ಕಡೆಮನಿ, ತಾಲೂಕಾಧ್ಯಕ್ಷ ರಮೇಶ ಬೇಳೂರು, ವಿರುಪಾಕ್ಷಗೌಡ, ರಮೇಶ ಹದ್ಲಿ, ಸೋಮಶೇಖರ, ದೇವಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

Sunday, April 28, 2013

ಮಾದರಿ ಮತಪೆಟ್ಟಿಗೆಯಿಂದ ಮತದಾನದ ಪ್ರಾತ್ಯಕ್ಷಿಕೆ


ಕೊಪ್ಪಳ, ಏ.೨೮: ತಾಲೂಕಿನ ಓಜನಹಳ್ಳಿ ಗ್ರಾಮ ಸೇರಿದಂತೆ ಕೋಳೂರು, ನೇರೆಗಲ್,ಚಿಲವಾಡಗಿ ಹಟ್ಟಿ, ಮಾದಿನೂರು, ಯತ್ನಟ್ಟಿಯ ಗ್ರಾಮೀಣ ಜನತೆಗೆ ಕೊಪ್ಪಳ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್ ಮಾದರಿ ಮತಪೆಟ್ಟಿಗೆ ಮೂಲಕ ಮತದಾನದ ಪ್ರಾತ್ಯಕ್ಷಿಕೆ ಮೂಲಕ ಜನತೆಗೆ ಮತದಾನ ಕುರಿತು ತಿಳಿಯಪಡಿಸಿದರು.
ಗ್ರಾಮೀಣದ ಜನತೆಗೆ ಹೇಳಿದ್ದಲ್ಲದೇ ಪ್ರಾತ್ಯಕ್ಷಿಕೆಯಿಂದಲೂ ತಿಳಿಯಪಡಿಸಿದಾಗ ಮಾತ್ರ ತಿಳಿಯುತ್ತದೆ ಎಂದರು. ಮೇಲಿನಿಂದ ಕ್ರಮ ಸಂಖ್ಯೆ ೨ ಪ್ರದೀಪ ವಿರುಪಾಕ್ಷಗೌಡ ಪಾಟೀಲ್ ಭತ್ತದ ಹೊರೆ ಹೊತ್ತ ಮಹಿಳೆಯ ಚಿನ್ನೆಗೆ ಗುರುತು ಗುರಿತಿಸಿ ಮತದಾನ ಮಾಡುವಂತೆ ಅವರಿಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಟಿ.ಟಿ. ಪಾಟೀಲ್, ಮುಖಂಡರಾದ ಎಂ.ಡಿ. ಹುಸೇನ್ ಮಾಸ್ಟರ್, ಗಾಳೆಪ್ಪ ಕಡೆಮನಿ, ಹನುಮೇಶ, ರಮೇಶ, ಬಸಪ್ಪ, ವಿರುಪಾಕ್ಷಗೌಡ, ಪ್ರಭು ಬಬ್ಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾಂಗ್ರೆಸ್- ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು: ಎಂ.ವಿ. ಪಾಟೀಲ್



ಕೊಪ್ಪಳ, ಏ.೨೭: ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ಒಂದೇ ನಾಣ್ಯದ ಏರಡು ಮುಖಗಳು ಅವರ ಅಭಿವೃದ್ಧಿ ಕಾರ್ಯಗಳನ್ನು ಕಳೆದ ೩೦ ವರ್ಷಗಳಿಂದ ಕ್ಷೇತ್ರದ ಜನತೆ ಕಂಡಿದ್ದೀರಿ ಅವರದು ಹೊಂದಾಣಿಕೆಯ ರಾಜಕೀಯ, ಅಧಿಕಾರದ ವ್ಯಾಮೋಹದವರು. ಗೌಡ್ರ ಅಧಿಕಾರ ರಾಜಕೀಯಕ್ಕಾಗಿ ಚುನಾವಣೆಗೀಳಿದಿಲ್ಲ, ಜನರ ಸೇವೆಗಾಗಿ ಅವಕಾಶ ಬೇಡಿ ಬಂದಿದ್ದಾರೆ

ಎಂದು ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ವಿ. ಪಾಟೀಲ್ ಹೇಳಿದರು.
ಅವರು ಶನಿವಾರ ತಾಲೂಕಿನ ಹೀರೆಸಿಂದೋಗಿ ಗ್ರ್ರಾಮದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಮತದಾನದ ಎರಡು ದಿನ ಮುಂಚೆಯೇ ಜನರಿಗೆ ದುಡ್ಡು ಕೊಟ್ಟು ಬದಲಾಯಿಸಬಹುದೆಂದು ಅವರು ನಂಬಿದ್ದಾರೆ ಆದರೆ ಈ ಬಾರಿ ಮತದಾರರು ಅದನ್ನು ಸುಳ್ಳಾಗಿಸಬೇಕು. ಕ್ಷೇತ್ರದ ಪೂರ್ವಭಾಗದ ಮುಖಂಡರಿಗೆ ಮನ್ನಣೆ ನೀಡಿ ಅಧಿಕಾರ ನೀಡಿದ್ದೇವೆ ಆದರೆ ಈ ಬಾರಿಯಾದರೂ ಕ್ಷೇತ್ರದ ಪಶ್ಚಿಮ ಭಾಗದ ನಮ್ಮ ಗೌಡರಿಗೆ ಬೆಂಬಲಿಸಿ ಈ ಭಾಗದ ಅಭಿವೃದ್ಧಿಗೆ ಬೆಂಬಲಿಸಬೇಕೆಂದು ಅವರಿಲ್ಲಿ ಮನವಿ ಮಾಡಿದರು.
ಜೆಡಿಎಸ್ ಪಕ್ಷ ತಾಲೂಕ ಕಾರ್ಯದರ್ಶಿ ಶೇಖಪ್ಪ ಲಕ್ಷಾಣಿ ಮಾತನಾಡಿ, ಇಲ್ಲಿಯವರೆಗೂ ಎಲ್ಲರಿಗೆ ದುಡಿದು ಸಾಕಾಗಿದೆ. ಅವರಿಂದ ಅಭಿವೃದ್ಧಿ ನೆಪದಲ್ಲಿ ತಮ್ಮ ಅಭಿವೃದ್ಧಿಯೇ ಹೆಚ್ಚಾಗಿದೆ. ತಮ್ಮ ಕುಟುಂಬ, ಬಂಧುಭಾಂದವರ ಅಭಿವೃದ್ಧಿಯಾಗಿದೆ ಆದರೆ ಕ್ಷೇತ್ರದ ಅಭಿವೃದ್ಧಿಯಾಗಿಲ್ಲ, ಅಲ್ಲದೇ ಅವರ ಬೆನ್ನಹಿಂದೆ ಯಾರನ್ನುಬೆಳೆಸಿಲ್ಲ. ಅಧಿಕಾರ ತಮ್ಮ ಕುಟುಂಬಕ್ಕೆ ಮಿಸಲಾಗಿರುವಂತೆ ನೋಡಿಕೊಳ್ಳುತ್ತಿದ್ದಾರೆ ಇದನ್ನು ಜನತೆ ಅರಿತು ನಿರ್ಧಾರ ಕೈಗೊಂಡು ಜೆಡಿಎಸ್‌ಗೆ ಬೆಂಬಲಿಸುವಂತೆ ಕೋರಿದರು.
ಇದೇ ವೇಳೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್ ಮಾತನಾಡಿ, ಈ ಭಾಗದ ಜನರ ಅಭಿಮಾನ ಮತದಾನವಾಗಿ ಪರಿವರ್ತನೆಗೊಳ್ಳಲಿ ಮತದಾನದ ಮಹತ್ವ ಅರಿತು ಮತದಾನ ಮಾಡಿ ಸುಳ್ಳು ಭರವಸೆ, ಆಮಿಷಗಳಿಗೆ ಓಳಗಾಗಬೇಡಿ ಎಂದು ಕಿವಿ ಮಾತು ಹೇಳಿದರು. 
ಅದ್ದುರಿ ಸ್ವಾಗತ: ಹೀರೆಸಿಂದೋಗಿ ಗ್ರಾಮಕ್ಕೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್ ಗ್ರಾಮಕ್ಕೆ ಆಗಮಿಸುತ್ತಿದಂತೆ ಗ್ರಾಮದ ಜನತೆ ಅಭಿಮಾನಿಗಳು ಪಟಾಕಿ ಸೀಡಿ ವಿವಿಧ ಘೋಷಣೆಗಳನ್ನು ಕುಗುತ್ತಾ ಅದ್ಧೂರಿಯಾಗಿ ಸ್ವಾಗತಿಸಿದರು. 

Friday, April 26, 2013

ಬಣ್ಣದ ಮಾತಿಗೆ, ಸುಳ್ಳು ಭರವಸೆಗಳಿಗೆ ಮಾರು ಹೋಗಬೇಡಿ: ಲಕ್ಷಾಣಿ





ಕೊಪ್ಪಳ, ಏ.೨೬: ಕ್ಷೇತ್ರದಲ್ಲಿ ಕಳೆದ ಹಲವು ವರ್ಷಗಳಿಂದ ಸುಳ್ಳು ಭರವಸೆ, ಬಣ್ಣದ ಮಾತುಗಳಿಂದ ಜನತೆಯನ್ನು ಮರುಳು ಮಾಡಿದ್ದಾರೆ. ಇನ್ನಾದರೂ ಜನತೆ ಬದಲಾವಣೆಗೆ ಮುಂದಾಗಿ, ಅವರಿಬ್ಬರಿಗೆ ಕ್ಷೇತ್ರವನ್ನು ಅಗ್ರಿಮೆಂಟ್ ಮಾಡಿಕೋಡದಿರಿ ಕ್ಷೇತ್ರದ ಬದಲಾವಣೆ ಮುಂದಾಗಿ ಎಂದು ಜೆಡಿಎಸ್ ತಾಲೂಕು ಕಾರ್ಯದರ್ಶಿ ಶೇಖಪ್ಪ ಲಕ್ಷಾಣಿ ಜನತೆಗೆ ಕರೆ ನೀಡಿದರು. 
ಅವರು ಗುರುವಾರ ತಾಲೂಕಿನ ಬಿಕನಳ್ಳ್ಳಿ ಗ್ರಾಮದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಭ್ರಷ್ಟಾಚಾರದಲ್ಲಿ ಬಿಜೆಪಿ, ಅಧಿಕಾರ ವ್ಯಾಮೋಹದಲ್ಲಿ ಕಾಂಗ್ರೆಸ್ ಪಕ್ಷ ಕ್ಷೇತ್ರದಲ್ಲಿ ತಮ್ಮದೆಯಾದ ದುರುದ್ದೇಶಗಳಿಂದ ಗುರುತಿಸಿಕೊಂಡಿದ್ದು, ಜೆಡಿಎಸ್‌ನ ಕವಲೂರು ಗೌಡ್ರ ಮಾತ್ರ ನಿಶ್ಕಳಂಕಿತ ವ್ಯಕ್ತಿಯಾಗಿದ್ದು, ಹೆಸರಾಂತ ಮನೆತನದಿಂದ ಬಂದವರು ಎಂದು ಅವರು ಸಣ್ಣತನದ ವ್ಯಕ್ತಿತ್ವ ತೋರಿದವರಲ್ಲವೆಂದರು. ಜೆಡಿಎಸ್‌ನಿಂದ ಮಾತ್ರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಅಲ್ಲದೇ ಗೌಡ್ರು ನುಡಿದಂತೆ ನೆಡೆಯುವ ವ್ಯಕ್ತಿಯಾಗಿದ್ದಾರೆ ಎಂದರು.
ಹೊಸಮುಖ, ಹೊಸತನದ ಕ್ಷೇತ್ರದ ಬಗ್ಗೆ ಕಳಕಳಿಯುಳ್ಳವರಿಗೆ ಕವಲೂರು ಗೌಡ್ರರಿಗೆ ನಿಮ್ಮ ಮತ ಮಿಸಲಾಗಿರಲಿ ಎಂದು ಜೆಡಿಎಸ್ ಪಕ್ಷದ ಮುಖಂಡ ಟಿ.ಟಿ. ಪಾಟೀಲ್ ಹೇಳಿದರು. ನಮ್ಮನ್ನು ಓಟ್ ಬ್ಯಾಂಕ್‌ನ್ನಾಗಿಸಿಕೊಂಡ ಕಾಂಗ್ರೆಸ್‌ಗೆ ಮತ್ತು ಬಣ್ಣದ ಮಾತಿನ ಬಿಜೆಪಿ ಪಕ್ಷಕ್ಕೆ ಅಧಿಕಾರ ನೀಡಿದ ಸಮಾಜ ಬಾಂಧವರು ಈ ಬಾರಿ ಜೆಡಿಎಸ್ ಸರಳ ಸಜ್ಜನಿಕೆಯ ಕೊಡುಗೈದಾನಿ ಪ್ರದೀಪಗೌಡ್ರಗೆ ಇದೊಂದು ಬಾರಿ ಬೆಂಬಲಿಸಿ ಬಹುಮತದಿಂದ ಜಯಗಳಿಸಲು ತಾವೇಲ್ಲಾ ಆಶೀರ್ವದಿಸಬೇಕೆಂದರು. 
ಇದೇ ವೇಳೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್ ಮಾತನಾಡಿ, ಈ ಭಾಗದ ಜನರ ಅಭಿಮಾನ ಮತದಾನವಾಗಿ ಪರಿವರ್ತನೆಗೊಳ್ಳಲಿ ಮತದಾನದ ಮಹತ್ವ ಅರಿತು ಮತದಾನ ಮಾಡಿ ಸುಳ್ಳು ಭರವಸೆ, ಆಮಿಷಗಳಿಗೆ ಓಳಗಾಗಬೇಡಿ ಎಂದು ಕಿವಿ ಮಾತು ಹೇಳಿದರು. 
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ಮಾಜಿ ಸಚಿವ ವಿರುಪಾಕ್ಷಪ್ಪ ಅಗಡಿ, ಮಾಜಿ ಜಿ.ಪಂ. ಸದಸ್ಯ ಮೋತಿಲಾಲ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷರುಗಳಾದ ಎಂ.ವಿ. ಪಾಟೀಲ್, ನಿಲಕಂಠಯ್ಯ ಹಿರೇಮ ಠ, ನಗರಸಭೆ ಮಾಜಿ ಸದಸ್ಯ ಈರಣ್ಣ ಹಂಚಿನಾಳ ಹಾಗೂ ಹಿರಿಯರಾದ ಹಲಗೇರಿ ಬಸವರಾಜಪ್ಪ, ತಾಲ್ಲೂಕಾಧ್ಯಕ್ಷ ಅಂದಪ್ಪ ಮರೇಬಾಳ, ಕಾರ್ಯದರ್ಶಿ ಶೇಖಪ್ಪ ಲಕ್ಷಾಣಿ, ಎಸ್. ಟಿ ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಹೆಚ್.ರಮೇಶ ವಣಬಳ್ಳಾರಿ, ಪಕ್ಷದ ಮುಖಂಡರಾದ ವಿರೇಶ್‌ಮಹಾಂತಯ್ಯನಮಠ್, ರಾಜು ಹಲಗೇರಿ, ಕೋಟ್ರಪ್ಪ ಕೋರ್ಲಳ್ಳಿ, ಎಂ.ಡಿ.ಹುಸೇನ ಮಾಸ್ಟರ್, ನಗರ ಸಭೆ ಸದಸ್ಯರಾದ ಚನ್ನಪ್ಪ ಕೋಟ್ಯಾಳ್, ಖಾಜಾವಲಿ ಬನ್ನಿಕೊಪ್ಪ, ನಗರ ಯುವ ಘಟಕದ ಅಧ್ಯಕ್ಷ ಸೈಯದ್ ಎಂ.ಹುಸೇನಿ, ಟಿ.ಟಿ. ಪಾಟೀಲ್, ಸಿದ್ದಾರಡ್ಡಿ ಡಂಬ್ರಳ್ಳಿ, ಇಸೂಫ್‌ಖಾನ್, ಹನುಮಂತಪ್ಪ ಹೀರೆಸಿಂದೋಗಿ, ರಮೇಶ ಹದ್ಲಿ, ಶಂಕರ ಗೆ ಜ್ಜಿ, ದೇವೆಂದ್ರಪ್ಪ, ಭಾಗ್ಯನಗರದ ಮಂಜುನಾಥ ಶ್ಯಾವಿ, ಮಂಜುನಾಥ್ ಗಡ್ಡದ್, ವೆಂಕಟೇಶ ಬೆಲ್ಲದ್, ಅಮರೇಶ ಮುರುಳಿ, ವಿಜಯಕುಮಾರ ಬಿಸರಳ್ಳಿ, ಪ್ರಭು ಬಬ್ಲಿ ಸೇರಿದಂತೆ ಪಕ್ಷದ ಇತರ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

Monday, April 22, 2013

ವೈಯುಕ್ತಿಕ ಮಾಹಿತಿ

ಪ್ರದೀಪ್

ತಂದೆ  : ವಿರುಪಾಕ್ಷಗೌಡ  ಮಾಲೀಪಾಟೀಲ್

ತಾಯಿ : ಅನ್ನಪೂರ್ಣಾದೇವಿ

ಜನ್ಮದಿನಾಂಕ : 4-7-1967

ವಿದ್ಯಾರ್ಹತೆ : ಡಿಪ್ಲೋಮಾ ಇನ್ ಅಟೋಮೊಬೈಲ್ಸ್

ಪತ್ನಿ : ಮಲ್ಲಮ್ಮ

ಮಕ್ಕಳು : ಸುಚಿತ್ , ವಿಶಾಲ್

ವೃತ್ತಿ :  ವ್ಯವಸಾಯ

ಕೊಪ್ಪಳ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ದೆ  (ಪಡೆದ ಮತಗಳು 20719)

Sunday, April 21, 2013

ಸಜ್ಜನಿಕೆಯ ಕವಲೂರುಗೌಡ್ರರ ಗೆಲುವಿಗೆ ಯುವಜನತೆ ಸನ್ನದ್ಧವಾಗಿದೆ: ರಾಜೇಶ ಯಾವಗಲ್


ಕೊಪ್ಪಳ, ಏ.೨೧: ಸಜ್ಜನಿಕೆ, ಸರಳ ವ್ಯಕ್ತಿತ್ವದ ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್‌ರ ಗೆಲುವಿಗೆ ಕ್ಷೇತ್ರದ ಯುವಜನತೆ ಸನ್ನದ್ಧವಾಗಿದೆ ಎಂದು ಯುವ ಮುಖಂಡ ರಾಜೇಶ ಯಾವಗಲ್ ಹೇಳಿದರು.
ಅವರು ಶನಿವಾರ ನಗರದ ಕೇಂದ್ರ ಬಸ್ ನಿಲ್ದಾಣದ ಹತ್ತಿರದ ಸ್ಪಂದನ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆಯಲ್ಲಿ ನಡೆದ ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ,  ಕ್ಷೇತ್ರದಲ್ಲಿ ಜೆಡಿಎಸ್‌ಗೆ ಹೆಚ್ಚಿನ ಓಲವಿದೆ. ಅದರಲ್ಲೂ ಕವಲೂರು ಗೌಡರ ಬಗ್ಗೆ ಹೆಚ್ಚಿನ ಓಲವು ಹಾಗೂ ಅಭಿಮಾನಿಗಳಿದ್ದು ಅವರ ಗೆಲವು ನಿಶ್ಚಳವೆಂದರು. ನಿಷ್ಠಾವಂತ ಯುವ ಕಾರ್ಯಕರ್ತರು ಪ್ರತಿ ಗ್ರಾಮಗಳಲ್ಲಿದ್ದು ಅವರೆಲ್ಲಾ ಗೌಡರ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಯಾವುದೇ ಕುತಂತ್ರಕ್ಕೂ ಅವಕಾಶ ನೀಡಬಾರದು ಎಂದು ನುಡಿದರು. 
ಇದೇ ವೇಳೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್ ಮಾತನಾಡಿ, ಪಕ್ಷದ ನಿಷ್ಠಾವಂತ ಕಾರ್ಯಕರ್ತ ಇಂದು ತಮ್ಮ ಕ್ಷೇತ್ರದಲ್ಲಿ ಸಕ್ರೀಯವಾಗಿ ಪಕ್ಷದ ಕಾರ್ಯದಲ್ಲಿ ತೊಡಗಿದ್ದು ಯುವ ಕಾರ್ಯಕರ್ತರು ಹೆಚ್ಚಿನ ಜವಬ್ದಾರಿವಹಿಸಿ ಕಾರ್ಯನಿರ್ವಹಿಸಬೇಕಿದೆ. ಪಕ್ಷಕ್ಕೆ ದಿನದಿಂದ ದಿನಕ್ಕೆ ಸ್ವಪ್ರೇರಣೆಯಿಂದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ನಮಗೆ ಮತ್ತಷ್ಟು ಜಯದ ವಿಶ್ವಾಸ ಹೆಚ್ಚಿಸಿದೆ. ಅದೇ ರೀತಿ ತಾವೇಲ್ಲಾ ಅಭಿಮಾನದ ಜನತೆಯನ್ನು ಮತದಾನದ ಮೂಲಕ ಪರಿವರ್ತನೆಗೆ ಮುಂದಾಗಬೇಕೆಂದರು. 
  ಈ ಸಂದರ್ಭದಲ್ಲಿ ಸುಮಾರು ೫೦ ಕ್ಕೂ ಹೆಚ್ಚು ಯುವಕರು ಪಕ್ಷ ಸೇರ್ಪಡೆಗೊಂಡರು. 
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ಮಾಜಿ ಸಚಿವ ವಿರುಪಾಕ್ಷಪ್ಪ ಅಗಡಿ, ಮಾಜಿ ಜಿ.ಪಂ. ಸದಸ್ಯ ಮೋತಿಲಾಲ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷರುಗಳಾದ ಎಂ.ವಿ. ಪಾಟೀಲ್, ನಿಲಕಂಠಯ್ಯ ಹಿರೇಮ ಠ, ನಗರಸಭೆ ಮಾಜಿ ಸದಸ್ಯ ಈರಣ್ಣ ಹಂಚಿನಾಳ ಹಾಗೂ ಹಿರಿಯರಾದ ಹಲಗೇರಿ ಬಸವರಾಜಪ್ಪ, ತಾಲ್ಲೂಕಾಧ್ಯಕ್ಷ ಅಂದಪ್ಪ ಮರೇಬಾಳ, ಕಾರ್ಯದರ್ಶಿ ಶೇಖಪ್ಪ ಲಕ್ಷಾಣಿ, ಎಸ್. ಟಿ ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಹೆಚ್.ರಮೇಶ ವಣಬಳ್ಳಾರಿ, ಪಕ್ಷದ ಮುಖಂಡರಾದ ವಿರೇಶ್‌ಮಹಾಂತಯ್ಯನಮಠ್, ರಾಜು ಹಲಗೇರಿ, ಕೋಟ್ರಪ್ಪ ಕೋರ್ಲಳ್ಳಿ, ಎಂ.ಡಿ.ಹುಸೇನ ಮಾಸ್ಟರ್, ನಗರ ಸಭೆ ಸದಸ್ಯರಾದ ಚನ್ನಪ್ಪ ಕೋಟ್ಯಾಳ್, ಖಾಜಾವಲಿ ಬನ್ನಿಕೊಪ್ಪ, ನಗರ ಯುವ ಘಟಕದ ಅಧ್ಯಕ್ಷ ಸೈಯದ್ ಎಂ.ಹುಸೇನಿ, ಟಿ.ಟಿ. ಪಾಟೀಲ್, ಸಿದ್ದಾರಡ್ಡಿ ಡಂಬ್ರಳ್ಳಿ, ಇಸೂಫ್‌ಖಾನ್, ಹನುಮಂತಪ್ಪ ಹೀರೆಸಿಂದೋಗಿ, ರಮೇಶ ಹದ್ಲಿ, ಶಂಕರ ಗೆ ಜ್ಜಿ, ದೇವೆಂದ್ರಪ್ಪ, ಭಾಗ್ಯನಗರದ ಮಂಜುನಾಥ ಶ್ಯಾವಿ, ಮಂಜುನಾಥ್ ಗಡ್ಡದ್, ವೆಂಕಟೇಶ ಬೆಲ್ಲದ್, ಅಮರೇಶ ಮುರುಳಿ, ವಿಜಯಕುಮಾರ ಬಿಸರಳ್ಳಿ, ಪ್ರಭು ಬಬ್ಲಿ ಸೇರಿದಂತೆ ಪಕ್ಷದ ಇತರ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

ಜೆಡಿಎಸ್ ಸೇರ್ಪಡೆ



ಕೊಪ್ಪಳ, ಏ.೨೧: ಸಮೀಪದ ಭಾಗ್ಯನಗರ ಗ್ರಾಮದ ಮಡಿವಾಳ
ಸಂಘದ ಅಧ್ಯಕ್ಷ ಹನುಮಂತಪ್ಪ ಮಡಿವಾಳ ಸದಸ್ಯರಾದ ಶಿವಣ್ಣ, ಗವಿಸಿದ್ದಪ್ಪ, ಪಂಪಣ್ಣ ಸೇರಿದಂತೆ ಇತರರು ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್‌ರ ಸಮ್ಮುಖದಲ್ಲಿ ಅಧಕೃತವಾಗಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.

Tuesday, April 16, 2013

ಭಾಗ್ಯನಗರ: ಜೆಡಿಎಸ್ ಸೇರ್ಪಡೆ


ಕೊಪ್ಪಳ, ಏ.೧೬: ಸಮೀಪದ ಭಾಗ್ಯನಗರ ಗ್ರಾಮದ ೧ ನೇ ವಾರ್ಡಿನ ಕಲಾವತಿ ಪವಾರ, ಲಕ್ಷ್ಮವ್ವ  ಮುದೇನಗುಡಿ ಹಾಗೂ ಸರೋಜಮ್ಮ ಹನುಮಂತಪ್ಪ ತಟ್ಟಿ ಯವರ ನೇತೃತ್ವದ ಸ್ತ್ರೀ ಶಕ್ತಿ ಗುಂಪುಗಳ ನೂರಾರು ಮಹಿಳೆಯರು ಮಂಗಳವಾರ ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್‌ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು. 
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತಾಲ್ಲೂಕಾಧ್ಯಕ್ಷ ಅಂದಪ್ಪ ಮರೇಬಾಳ,ಎಸ್. ಟಿ ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಹೆಚ್.ರಮೇಶ ವಣಬಳ್ಳಾರಿ, ಪಕ್ಷದ ಮುಖಂಡರಾದ ವಿರೇಶ್‌ಮಹಾಂತಯ್ಯನಮಠ್, ಕೋಟ್ರಪ್ಪ ಕೋರ್ಲಳ್ಳಿ, ಎಂ.ಡಿ.ಹುಸೇನ ಮಾಸ್ಟರ್, ನಗರ ಸಭೆ ಸದಸ್ಯರಾದ ಚನ್ನಪ್ಪ ಕೋಟ್ಯಾಳ್, ಖಾಜಾವಲಿ ಬನ್ನಿಕೊಪ್ಪ, ನಗರ ಯುವ ಘಟಕದ ಅಧ್ಯಕ್ಷ ಸೈಯದ್ ಎಂ. ಹುಸೇನಿ, ಟಿ.ಟಿ. ಪಾಟೀಲ್, ಸಿದ್ದಾರಡ್ಡಿ ಡಂಬ್ರಳ್ಳಿ, ಇಸೂಫ್‌ಖಾನ್, ಹನುಮಂತಪ್ಪ ಹೀರೆಸಿಂದೋಗಿ, ಪಿ.ಆರ್. ಚಿಗರಿ,  ದೇವೆಂದ್ರಪ್ಪ, ಭಾಗ್ಯನಗರದ ಲಕ್ಷ್ಮಣ ಜಾಣ, ಪಾಂಡುರಂಗ ಜಾಣ, ಮಲ್ಲಿಕಾರ್ಜುನ ಎಸ್., ಮಂಜುನಾಥ ಶ್ಯಾವಿ, ಮಂಜುನಾಥ್ ಗಡ್ಡದ್, ವೆಂಕಟೇಶ ಬೆಲ್ಲದ್, ಅಮರೇಶ ಮುರುಳಿ, ವಿಜಯಕುಮಾರ ಬಿಸರಳ್ಳಿ, ಸೇರಿದಂತೆ ಪಕ್ಷದ ಅನೇಕ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

ಪ್ರದೀಪಗೌಡ ಮಾಲೀಪಾಟೀಲ್ ರಿಂದ ನಾಮಪತ್ರ ಸಲ್ಲಿಕೆ





ಪ್ರದೀಪ ವಿರೂಪಾಕ್ಷಗೌಡ ಪಾಟೀಲ್ ಅವರು ಜೆಡಿಎಸ್ ಪಕ್ಷದಿಂದ ಎರಡು ನಾಮಪತ್ರ  ಸಲ್ಲಿಸಿದರು. ತಮ್ಮ ಅಪಾರ ಬೆಂಬಲಿಗರು,ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

Saturday, April 13, 2013

ಅಭಿವೃದ್ಧಿ ನೆಪದಲ್ಲಿ ಜನತೆಗೆ ವಂಚನೆ: ಪ್ರದೀಪಗೌಡ


ಕೊಪ್ಪಳ,ಏ,೧೩: ಕಳೆದ ೩೦ ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿ ಮಂತ್ರದಲ್ಲಿಯೇ ಎಲ್ಲಾ ಪಕ್ಷದ ಮುಖಂಡರು ಬರಿ ಕ್ಷೇತ್ರದ ಜನತೆಗೆ ವಂಚಿಸುತ್ತಾ ಬಂದಿದ್ದಾರೆ. ಇನ್ನಾದರೂ ಜನತೆ ಬದಲಾವಣೆಗೆ ಮುಂದಾಗಬೇಕಿದೆ ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್ ಮನವಿ ಮಾಡಿದರು. 
ಅವರು ಶುಕ್ರವಾರ ತಾಲೂಕಿನ ಬೇಳೂರು ಗ್ರಾಮದಲ್ಲಿ ವಿವಿಧ ಪಕ್ಷಗಳ ನೂರಾರು ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ನಂತರ ಮಾತನಾಡಿ, ಪಕ್ಷಕ್ಕೆ ದಿನದಿಂದ ದಿನಕ್ಕೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ಇದೊಂದು ಶುಭ ಸಂಕೇತ. ತಾವೇಲ್ಲಾ ಪಕ್ಷದ ಶಕ್ತಿಯಾಗಿದ್ದು ಇದು ಗೌಡರ ಚುನಾವಣೆ ಎಂದು ಪರಿಗಣಿಸದೇ ಇದು ನಿಮ್ಮ ಚುನಾವಣೆ ನಿಮ್ಮ ಗ್ರಾಮದ ಅಭಿವೃದ್ಧಿಗೆ ನೀವೆ ಮುಂದಾಗಬೇಕಾದ ಮಹತ್ತರ ಕಾರ್ಯವೆಂದರು. ಅಭಿವೃದ್ಧಿ ಎಂಬುದು ಬರಿ ನಿಮ್ಮನ್ನು ವಂಚಿಸುವ ಕಾರ್ಯ ಅದಕ್ಕೆ ಜನತೆ ಏಚ್ಛೆತ್ತುಕೊಳ್ಳಬೇಕಿದೆ. ಈ ಬಾರಿ ಎಲ್ಲವನ್ನು ತುಲಾತ್ಮಕವಾಗಿ ಅಳೆದು ನೋಡಿ ಹೊಸತನದ ಬದಲಾವಣೆಗೆ ತಾವೇಲ್ಲಾ ಸಹಕರಿಸಬೇಕೆಂದರು.  
ಇದೇ ವೇಳೆ ಜೆಡಿಎಸ್ ಪಕ್ಷದ ತಾಲ್ಲೂಕಾಧ್ಯಕ್ಷ ಅಂದಪ್ಪ ಮರೇಬಾಳ, ಕಾರ್ಯದರ್ಶಿ ಶೇಖಪ್ಪ ಲಕ್ಷಾಣಿ, ಎಂ.ಡಿ.ಹುಸೇನ ಮಾಸ್ಟರ್, ಟಿ.ಟಿ. ಪಾಟೀಲ್ ಮಾತನಾಡಿ, ಕಿಲ್ಲೆದ್ ಗೌಡ್ರ ವಂಶ ಬರಿ ನೀಡಿದ ವಂಶವೇ ಹೋರತೂ ಬೇಡಿದಲ್ಲಾ ಹಾಗೇ ಅವರೆಂದು ಜನರ ಹಣ ಬಡಿದು ತಿನ್ನುವುದಿಲ್ಲವೆಂಬುದು ಜನತೆ ಅರಿತರೇ ಸಾಕು. ಅವರ ಸಜ್ಜನಿಕೆ ಸರಳವ್ಯಕ್ತಿತ್ವದ ವ್ಯಕ್ತಿಯಾಗಿದ್ದು ಇದೊಂದು ಬಾರಿ ಅವರಿಗೆ ಜನ ಸೇವೆ ಮಾಡುವ ಅವಕಾಶ ಕಲ್ಪಿಸಿಕೊಂಡಬೇಕೆಂದರು. ಕ್ಷೇತ್ರದಾಧ್ಯಂತ ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಇದಕ್ಕೆ ಇಂದು ತಾವು ಸ್ವ ಪ್ರೇರಣೆಯಿಂದ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದೇ ಸಾಕ್ಷಿ ಎಂದರು. 
 ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಎಸ್. ಟಿ ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಹೆಚ್.ರಮೇಶ ವಣಬಳ್ಳಾರಿ, ಪಕ್ಷದ ಮುಖಂಡರಾದ ವಿರೇಶ್‌ಮಹಾಂತಯ್ಯನಮಠ್, ರಾಜು ಹಲಗೇರಿ, ಕೋಟ್ರಪ್ಪ ಕೋರ್ಲಳ್ಳಿ, ಎಂ.ಡಿ. ನಗರ ಸಭೆ ಸದಸ್ಯರಾದ ಚನ್ನಪ್ಪ ಕೋಟ್ಯಾಳ್, ಖಾಜಾವಲಿ ಬನ್ನಿಕೊಪ್ಪ, ನಗರ ಯುವ ಘಟಕದ ಅಧ್ಯಕ್ಷ ಸೈಯದ್ ಮಹೆಮುದ್ ಹುಸೇನಿ, ಟಿ.ಟಿ. ಪಾಟೀಲ್, ಸಿದ್ದಾರಡ್ಡಿ ಡಂಬ್ರಳ್ಳಿ, ಇಸೂಫ್‌ಖಾನ್, ಹನುಮಂತಪ್ಪ ಹೀರೆಸಿಂದೋಗಿ,  ದೇವೆಂದ್ರಪ್ಪ, ಭಾಗ್ಯನಗರದ ಮಂಜುನಾಥ ಶ್ಯಾವಿ, ಮಂಜುನಾಥ್ ಗಡ್ಡದ್, ವೆಂಕಟೇಶ ಬೆಲ್ಲದ್, ಅಮರೇಶ ಮುರುಳಿ, ವಿಜಯಕುಮಾರ ಬಿಸರಳ್ಳಿ, ಪ್ರಭು ಬಬ್ಲಿ ಸೇರಿದಂತೆ ಪಕ್ಷದ ಇತರ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

ಭಾಗ್ಯನಗರ ಯುವಘಟಕದ ಸಭೆ


ಕೊಪ್ಪಳ,ಏ,೧೩: ನಗರದ ಕೂಗಳತೆ ದೂರದಲ್ಲಿರುವ ಭಾಗ್ಯನಗರ ಗ್ರಾಮದಲ್ಲಿ ಇಂದು ಜೆಡಿಎಸ್ ಯುವ ಘಟಕದ ಸಭೆ ನಡೆಸಲಾಯಿತು. ಸಭೆಯ ನೇತೃತ್ವವನ್ನು ಪಕ್ಷದ ಎಸ್. ಟಿ ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಮಂಜುನಾಥ್ ಗಡ್ಡದ್, ರಾಮಚಂದ್ರ ಅಡ್ಡೇದರ್, ಮಂಜುನಾಥ ಶ್ಯಾವಿ ಇತರರ ಮುಖಂಡತ್ವದಲ್ಲಿ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸುಮಾರು ನೂರಕ್ಕೂ ಹೆಚ್ಚು ಯುವಕರು ಪಕ್ಷ ಸೇರ್ಪಡೆಗೊಳ್ಳುವ ಆಶಯ ವ್ಯಕ್ತಪಡಿಸಿದರಲ್ಲದೇ ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಳ್ಳುವ ಮೂಲಕ ಕ್ಷೇತ್ರದ ಬದಲಾವಣೆಯಲ್ಲಿ ಕೈಜೋಡಿಸಿ ಪಕ್ಷದ ಬೆನ್ನೆಲುಬಾಗಿ ನಿಲ್ಲುವ ಭರವಸೆ  ನೀಡಿದರು.





ಕಾಂಗ್ರೆಸ್,ಬಿಜೆಪಿ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆ


ಕೊಪ್ಪಳ, ಏ.೧೩: ತಾಲೂಕಿನ ಬೇಳೂರು ಗ್ರಾಮದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ  ಮುಖಂಡರಗಳ ವರ್ತನೆಗಳಿಂದ ಬೇಸರಗೊಂಡು ನೂರಾರು ಕಾರ್ಯಕರ್ತರು ಹಾಗೂ ಮುಖಂಡರು ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್‌ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು. 
ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್‌ರವರ ಸಮ್ಮುಖದಲ್ಲಿ ಮುಖಂಡರಾದ ರಮೇಶ ಎಂ. ಗುಡ್ಲಾನೂರು, ಪಕೀರಗೌಡ್ರ, ಮಂದಿನಗೌಡ್ರ, ಡಾ. ಮಲ್ಲಿಕಾರ್ಜುನ ಪಕೀರಪ್ಪ ಸುಣಗಾರ, ಕಾಮಣ್ಣ, ನಿಂಗಜ್ಜ ತಳವಾರ, ಗವಿಸಿದ್ದಪ್ಪ ತಳವಾರ ಇತರ ಮುಖಂಡರ ನೇತೃತ್ವದಲ್ಲಿ ಮುದೇಪ್ಪ, ನೀಲಪ್ಪ, ಹನುಮಪ್ಪ, ಯಗಪ್ಪ, ಗಾಳೆಪ್ಪ, ಪಕೀರಪ್ಪ, ದುರಗಪ್ಪ, ದ್ಯಾವಪ್ಪ, ಯಲ್ಲಪ್ಪ, ಸಣ್ಣ ದೇವಪ್ಪ, ನಿಂಗಪ್ಪ, ಕುಂಗ ಹನುಮಪ್ಪ, ರಾಮಪ್ಪ, ಯಮನೂರಪ್ಪ, ಗಾಳಿ ದುರಗಪ್ಪ, ಬಸವರಾಜ ಮಾದಣ್ಣವರ್, ಯಲ್ಲಪ್ಪ ಮಾದಣ್ಣನವರ್, ರಮೇಶ ದೊಡ್ಡಮನಿ ಸೇರಿದಂತೆ ನೂರಾರು ಕಾರ್ಯಕರ್ತರು ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು. 
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತಾಲ್ಲೂಕಾಧ್ಯಕ್ಷ ಅಂದಪ್ಪ ಮರೇಬಾಳ, ಕಾರ್ಯದರ್ಶಿ ಶೇಖಪ್ಪ ಲಕ್ಷಾಣಿ, ಎಸ್. ಟಿ ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಹೆಚ್.ರಮೇಶ ವಣಬಳ್ಳಾರಿ, ಪಕ್ಷದ ಮುಖಂಡರಾದ ವಿರೇಶ್‌ಮಹಾಂತಯ್ಯನಮಠ್, ರಾಜು ಹಲಗೇರಿ, ಕೋಟ್ರಪ್ಪ ಕೋರ್ಲಳ್ಳಿ, ಎಂ.ಡಿ.ಹುಸೇನ ಮಾಸ್ಟರ್, ನಗರ ಸಭೆ ಸದಸ್ಯರಾದ ಚನ್ನಪ್ಪ ಕೋಟ್ಯಾಳ್, ಖಾಜಾವಲಿ ಬನ್ನಿಕೊಪ್ಪ, ನಗರ ಯುವ ಘಟಕದ ಅಧ್ಯಕ್ಷ ಸೈಯದ್ ಮಹೆಮುದ್ ಹುಸೇನಿ, ಟಿ.ಟಿ. ಪಾಟೀಲ್, ಸಿದ್ದಾರಡ್ಡಿ ಡಂಬ್ರಳ್ಳಿ, ಇಸೂಫ್‌ಖಾನ್, ಹನುಮಂತಪ್ಪ ಹೀರೆಸಿಂದೋಗಿ,  ದೇವೆಂದ್ರಪ್ಪ, ಭಾಗ್ಯನಗರದ ಮಂಜುನಾಥ ಶ್ಯಾವಿ, ಮಂಜುನಾಥ್ ಗಡ್ಡದ್, ವೆಂಕಟೇಶ ಬೆಲ್ಲದ್, ಅಮರೇಶ ಮುರುಳಿ, ವಿಜಯಕುಮಾರ ಬಿಸರಳ್ಳಿ, ಪ್ರಭು ಬಬ್ಲಿ ಸೇರಿದಂತೆ ಪಕ್ಷದ ಇತರ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

Thursday, April 11, 2013

ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆ


ಕೊಪ್ಪಳ, ಏ.೧೧:  ನಗರದ ಕವಲೂರು ಓಣಿಯ ಬಿಜೆಪಿ ಪಕ್ಷದ ವಿವಿಧ ಮುಖಂಡರು ಹಾಗೂ ಕಾರ್ಯಕರ್ತರು ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್‌ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.
ಕವಲೂರು ಓಣಿಯ ರಮೇಶ ಹದ್ಲಿ, ಶಂಕರಗೌಡ ಮಾ.ಪಾ. ಕುಣಕೇರಿ, ಪ್ರಭು ಕವಲೂರು, ಬಿಟಿ ಪಾಟೀಲ್ ನಗರದ ರಾಜು ಹೊಸಮನಿ ನೇತೃತ್ವದ ಮಂಜುನಾಥ ಶ್ಯಾಪುರ, ಶಿವಣ್ಣ ಬೂದಿಹಾಳ, ಈರಯ್ಯ ಹಿರೇಮಠ, ರಮೇಶ ಅತ್ತಲ್ಲಿ, ದಾವೂದ್ ಬೇಳೂರು, ರಮೇಶ, ಪರಮೇಶ, ಆನಂದ ಸೇರಿದಂತೆ ಅನೇಕರು ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತಾಲ್ಲೂಕಾಧ್ಯಕ್ಷ ಅಂದಪ್ಪ ಮರೇಬಾಳ,ಎಸ್. ಟಿ ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ,
 






ಜಿಲ್ಲಾ ಯುವ ಘಟಕದ ಅಧ್ಯಕ್ಷ ಹೆಚ್.ರಮೇಶ ವಣಬಳ್ಳಾರಿ, ಪಕ್ಷದ ಮುಖಂಡರಾದ ವಿರೇಶ್‌ಮಹಾಂತಯ್ಯನಮಠ್, ಕೋಟ್ರಪ್ಪ ಕೋರ್ಲಳ್ಳಿ, ಎಂ.ಡಿ.ಹುಸೇನ ಮಾಸ್ಟರ್, ನಗರ ಸಭೆ ಸದಸ್ಯರಾದ ಚನ್ನಪ್ಪ ಕೋಟ್ಯಾಳ್, ಖಾಜಾವಲಿ ಬನ್ನಿಕೊಪ್ಪ, ನಗರ ಯುವ ಘಟಕದ ಅಧ್ಯಕ್ಷ ಸೈಯದ್ ಮಹೆಮುದ್ ಹುಸೇನಿ, ಟಿ.ಟಿ. ಪಾಟೀಲ್, ಸಿದ್ದಾರಡ್ಡಿ ಡಂಬ್ರಳ್ಳಿ, ಇಸೂಫ್‌ಖಾನ್, ಹನುಮಂತಪ್ಪ ಹೀರೆಸಿಂದೋಗಿ,  ದೇವೆಂದ್ರಪ್ಪ, ಭಾಗ್ಯನಗರದ ಮಂಜುನಾಥ ಶ್ಯಾವಿ, ಮಂಜುನಾಥ್ ಗಡ್ಡದ್, ವೆಂಕಟೇಶ ಬೆಲ್ಲದ್, ಅಮರೇಶ ಮುರುಳಿ, ವಿಜಯಕುಮಾರ ಬಿಸರಳ್ಳಿ, ಸೇರಿದಂತೆ ಪಕ್ಷದ ಅನೇಕ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
ತಾಂಡಾದ ನೂರಾರು ಕಾರ್ಯಕರ್ತರು ಜೆಡಿಎಸ್ ಸೇರ್ಪಡೆ
ಕೊಪ್ಪಳ, ಏ.೧೧:  ತಾಲೂಕಿನ ಕುಣಕೇರಿ ತಾಂಡಾ, ಹುಲಗಿ ತಾಂಡಾ ಮತ್ತು ಕನಕಾಪುರ ತಾಂಡಾದ ವಿವಿಧ ಪಕ್ಷಗಳ ನೂರಾರು ಕಾರ್ಯಕರ್ತರು ಹಾಗೂ ಮುಖಂಡರು ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್‌ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.
ತಾಂಡಾದ ಮುಖಂಡರಾದ ಶಂಕರನಾಯಕ, ಶಿವಪ್ಪ ಮುಂಗಲಿ, ಲಾಲಪ್ಪ ಬಡಿಗಿ, ಸುರೇಪ್ಪ ಜಾಕೋಡ್, ಬಾಳಪ್ಪ ಹಾಗೂ ಮಹಿಳಾ ಮುಖಂಡರಾದ ಜೀಣಾಬಾಯಿ, ನಾಜುಬಾಯಿ, ಶಾಂತವ್ವ ಗೌಡ್ರ, ಲಕ್ಷ್ಮವ್ವ ಬಂಡಿ ನೇತೃತ್ವದ ನೂರಾರು ಕಾರ್ಯಕರ್ತರು ಅಧಿಕೃತವಾಗಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತಾಲ್ಲೂಕಾಧ್ಯಕ್ಷ ಅಂದಪ್ಪ ಮರೇಬಾಳ,ಎಸ್. ಟಿ ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಹೆಚ್.ರಮೇಶ ವಣಬಳ್ಳಾರಿ, ಪಕ್ಷದ ಮುಖಂಡರಾದ ವಿರೇಶ್‌ಮಹಾಂತಯ್ಯನಮಠ್, ಕೋಟ್ರಪ್ಪ ಕೋರ್ಲಳ್ಳಿ, ಎಂ.ಡಿ.ಹುಸೇನ ಮಾಸ್ಟರ್, ನಗರ ಸಭೆ ಸದಸ್ಯರಾದ ಚನ್ನಪ್ಪ ಕೋಟ್ಯಾಳ್, ಖಾಜಾವಲಿ ಬನ್ನಿಕೊಪ್ಪ, ನಗರ ಯುವ ಘಟಕದ ಅಧ್ಯಕ್ಷ ಸೈಯದ್ ಮಹೆಮುದ್ ಹುಸೇನಿ, ಟಿ.ಟಿ. ಪಾಟೀಲ್, ಸಿದ್ದಾರಡ್ಡಿ ಡಂಬ್ರಳ್ಳಿ, ಇಸೂಫ್‌ಖಾನ್, ಹನುಮಂತಪ್ಪ ಹೀರೆಸಿಂದೋಗಿ,  ದೇವೆಂದ್ರಪ್ಪ, ಭಾಗ್ಯನಗರದ ಮಂಜುನಾಥ ಶ್ಯಾವಿ, ಮಂಜುನಾಥ್ ಗಡ್ಡದ್, ವೆಂಕಟೇಶ ಬೆಲ್ಲದ್, ಅಮರೇಶ ಮುರುಳಿ, ವಿಜಯಕುಮಾರ ಬಿಸರಳ್ಳಿ, ಸೇರಿದಂತೆ ಪಕ್ಷದ ಅನೇಕ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
 
ಗುನ್ನಳ್ಳಿ, ಯತ್ನಟ್ಟಿ ಯುವಕರು ಜೆಡಿಎಸ್ ಸೇರ್ಪಡೆ
ಕೊಪ್ಪಳ, ಏ.೧೧:  ತಾಲೂಕಿನ ಗುನ್ನಳ್ಳಿ ಹಾಗೂ ಯತ್ನಟ್ಟಿ ಗ್ರಾಮಗಳ ವಿವಿಧ ಪಕ್ಷಗಳ  ಕಾರ್ಯಕರ್ತರು ಹಾಗೂ ಮುಖಂಡರು ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್‌ರವರ ಸಮ್ಮುಖದಲ್ಲಿ ನಗರದ ಹೊರ ವಲಯದ  ಜೆಡಿಎಸ್ ಪಕ್ಷದ ಪ್ರಚಾರ ಕಾರ್ಯಾಲಯದಲ್ಲಿ ಪಕ್ಷ ಸೇರ್ಪಡೆಗೊಂಡರು.
ಗುನ್ನಳ್ಳಿ ಗ್ರಾಮದ ಹನುಮಪ್ಪ ಅಡೂರು, ನಾಗರಾಜ ಎಲ್‌ಎಲ್‌ಬಿ ಹಾಗೂ ಯತ್ನಟ್ಟಿ ಗ್ರಾಮದ ಚರಂಜೀವಿ ಪೂಜಾರ, ಮಲ್ಲಿಕಾರ್ಜುನ ಪೂಜಾರ ನೇತೃತ್ವದ ಯುವಕರು ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.

ಆಯ್ಕೆಯಾದರೆ ಮತದಾರರ ಮನೆ ಬಾಗಿಲಿಗೆ ಸೇವೆ: ಪ್ರದೀಪಗೌಡ
ಕೊಪ್ಪಳ,ಏ,೧೧: ಕ್ಷೇತ್ರದ ಜನತೆ ಆಯ್ಕೆಗೊಳಿಸಿದಲ್ಲಿ ಮತದಾರರ ಮನೆಗೆ ಅಲೆದು ಕ್ಷೇತ್ರದ ಅಭಿವೃದ್ಧಿ ಮತ್ತು ಜನ ಸೇವೆ ಮಾಡುವುದಾಗಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್ ತಿಳಿಸಿದರು.
ಅವರು ಮಂಗಳವಾರ ನಗರದ ಹೊಸಪೇಟೆ ರಸ್ತೆಯಲ್ಲಿನ ಜೆಡಿಎಸ್ ಪಕ್ಷದ ಪ್ರಚಾರ ಕಾರ್ಯಾಲಯದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಪಕ್ಷಗಳ ನೂರಾರು ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ನೆರೆದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
 ಜನಸೇವೆ ಮಾಡುವದಾಗಿ ಅಧಿಕಾರಕ್ಕೆ ಬಂದರವು ಜನತೆಯನ್ನು ಮನೆಗೆ ಅಲೆಸುವಂತೆ ನಾನು ಮಾಡುವುದಿಲ್ಲ, ಆಯಾ ಮತದಾರರೆಲ್ಲಾ ಆಜ್ಞೆಮಾಡಿದರೆ ಸಾಕು ಅಲ್ಲಿನ ಯಾವುದೇ ಸಮಸ್ಯೆ ಇರಲಿ ತಕ್ಷಣ ಪರಿಹರಿಸುವೇ. ಎಸ್‌ಎಂಎಸ್ ಮೂಲಕ ಸಮಸ್ಯೆ ತಿಳಿಸಿದರೆ ಪರಿಹಾರ ಕಂಡುಕೊಳ್ಳುವುದು ಒಟ್ಟಾರೆ ಅಧಿಕಾರ ಮತದಾರರ ಕೈಯಲ್ಲಿ ಎಂಬುದನ್ನು ಸಾಬೀತು ಪಡಿಸುತ್ತೇನೆ. ಅದೇ ರೀತಿ ಜನತೆಯೂ ದಕ್ಷ, ಪ್ರಾಮಾಣಿಕ ಹಾಗೂ ಜನಚಿಂತಕರಿಗೆ ನಮ್ಮ ಮತ ಎಂಬುದನ್ನು ಸಾಬೀತು ಪಡಿಸಲು ಈ ಚುನಾವಣೆ ಸಾಕ್ಷಿಯಾಗಬೇಕಿದೆ. ಪ್ರತಿಯೊಬ್ಬ ಮತದಾರ ಈ ಚುನಾವಣೆಯಲ್ಲಿ ಅದನ್ನು ನಿಜಗೊಳಿಸಲು ಕಡ್ಡಾಯ ಮತದಾನದ ಮೂಲಕ ಜೆಡಿಎಸ್ ಪಕ್ಷ ಅತ್ಯಧಿಕ ಮತಗಳಿಂದ ವಿಜಯಶಾಲಿಯಾಗಲು ತಾವೇಲ್ಲಾ ಬೆಂಬಲಿಸಿ ಹರಸಬೇಕೆಂದು ಅವರಿಲ್ಲಿ ಮನವಿ ಮಾಡಿದರು.
ದಿನದಿಂದ ದಿನಕ್ಕೆ ವಿವಿಧ ಪಕ್ಷಗಳ ಕಾರ್ಯಕರ್ತರು ನಮ್ಮ ಪಕ್ಷದ ದಕ್ಷತೆ ಹಾಗೂ ಜನಪರ ಕಾರ್ಯಗಳನ್ನು ಕಂಡು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷ ಸೇರ್ಪಡೆಗೊಳ್ಳುತ್ತಿರುವುದು ಪಕ್ಷಕ್ಕೆ ಮತಷ್ಟು ಆನೆ ಬಲ ಬಂದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. 
ಇದೇ ವೇಳೆ ನಗರ ಯುವ ಘಟಕದ ಅಧ್ಯಕ್ಷ ಸೈಯದ್ ಮಹೆಮುದ್ ಹುಸೇನಿ, ಇಸೂಫ್‌ಖಾನ್ ಸೇರಿದಂತೆ ಇತರರು ಮಾತನಾಡಿ, ಕ್ಷೇತ್ರದಾಧ್ಯಂತ ಗೌಡರ ಕುರಿತು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದಲ್ಲದೇ ಕ್ಷೇತ್ರದ ಅಭಿವೃದ್ಧಿ ಹಿತದೃಷ್ಠಿಯಿಂದ ಬದಲಾವಣೆಗೆ ಸೂಕ್ತ ಕಾಲವೆಂಬುದು ಮತದಾರರು ವ್ಯಕ್ತಪಡಿಸಿದ್ದು ಗೌಡರ ಗೆಲುವು ಖಚಿತವೆಂದರು.
 ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತಾಲ್ಲೂಕಾಧ್ಯಕ್ಷ ಅಂದಪ್ಪ ಮರೇಬಾಳ,ಎಸ್. ಟಿ ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಹೆಚ್.ರಮೇಶ ವಣಬಳ್ಳಾರಿ, ಪಕ್ಷದ ಮುಖಂಡರಾದ ವಿರೇಶ್‌ಮಹಾಂತಯ್ಯನಮಠ್, ಕೋಟ್ರಪ್ಪ ಕೋರ್ಲಳ್ಳಿ, ಎಂ.ಡಿ.ಹುಸೇನ ಮಾಸ್ಟರ್, ನಗರ ಸಭೆ ಸದಸ್ಯರಾದ ಚನ್ನಪ್ಪ ಕೋಟ್ಯಾಳ್, ಖಾಜಾವಲಿ ಬನ್ನಿಕೊಪ್ಪ, ನಗರ ಯುವ ಘಟಕದ ಅಧ್ಯಕ್ಷ ಸೈಯದ್ ಮಹೆಮುದ್ ಹುಸೇನಿ, ಟಿ.ಟಿ. ಪಾಟೀಲ್, ಸಿದ್ದಾರಡ್ಡಿ ಡಂಬ್ರಳ್ಳಿ, ಹನುಮಂತಪ್ಪ ಹೀರೆಸಿಂದೋಗಿ,  ದೇವೆಂದ್ರಪ್ಪ, ಭಾಗ್ಯನಗರದ ಮಂಜುನಾಥ ಶ್ಯಾವಿ, ಮಂಜುನಾಥ್ ಗಡ್ಡದ್, ವೆಂಕಟೇಶ ಬೆಲ್ಲದ್, ಅಮರೇಶ ಮುರುಳಿ, ವಿಜಯಕುಮಾರ ಬಿಸರಳ್ಳಿ, ಸೇರಿದಂತೆ ಪಕ್ಷದ ಅನೇಕ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಇದೇ ವೇಳೆ ಕನಕಾಪುರ ತಾಂಡಾ, ಹುಲಗಿ ತಾಂಡಾ ಹಾಗೂ ಕುಣಕೇರಿ ತಾಂಡಾದಿಂದ ಆಗಮಿಸಿದ ನೂರಾರು ಜನ ಕಾರ್ಯಕರ್ತರು ಹಾಗೂ ಮುಖಂಡರು ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್ ರವರ ಸಮ್ಮುಖದಲ್ಲಿ  ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.


ಒಂದಾದ ಮಾವ ಅಳಿಯ


ಪ್ರಕಟಿತ ಸುದ್ದಿಗಳು





Tuesday, April 9, 2013

ಪ್ರದೀಪಗೌಡ ಮಾಲೀಪಾಟೀಲರ ವೆಬ್‌ಸೈಟ್ ಉದ್ಘಾಟನೆ

ಕೊಪ್ಪಳ : ಕೊಪ್ಪಳ ಜನತಾದಳದ(ಎಸ್) ಅಭ್ಯರ್ಥಿ ಪ್ರದೀಪಗೌಡ ಮಾಲೀಪಾಟೀಲರ ಕುರಿತ ಪೂರ್ಣ ಮಾಹಿತಿ ನೀಡುವ ವೆಬ್‌ಸೈಟ್(ಬ್ಲಾಗ್)ನ್ನು ಉದ್ಘಾಟಿಸಲಾಯಿತು. ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ನೂತನ ಪ್ರಚಾರ ಕಾರ್ಯಾಲಯದಲ್ಲಿ ಹಿರಿಯ ನಾಯಕರಾದ ಸುರೇಶ ಭೂಮರಡ್ಡಿ ಹಾಗೂ ಅಭ್ಯರ್ಥಿ ಪ್ರದೀಪಗೌಡ ಮಾಲೀಪಾಟೀಲ್ ವೆಬ್ ತಾಣಕ್ಕೆ ಚಾಲನೆ ನೀಡಿದರು. ಇದರಲ್ಲಿ ಕವಲೂರಗೌಡ್ರ ಕಿಲ್ಲೆ,ಮನೆತನ ಹಾಗೂ ಅವರ ತಂದೆಯವರ ವಿವರಗಳು,ಫೋಟೋಗಳು ಲಭ್ಯವಿವೆ. ನಿರಂತರ ಜನಸೇವೆಯಲ್ಲಿ ತೊಡಗಿರುವ ಪ್ರದೀಪಗೌಡರ ಬಗ್ಗೆ, ಅಲ್ಲದೇ ಕಳೆದ ಉಪಚುನಾವಣೆಯ ಚಿತ್ರಗಳು ವರದಿಗಳು ಸೇರಿದಂತೆ ಹಲವಾರು ಮಾಹಿತಿಗಳು ಇದರಲ್ಲಿ ಲಭ್ಯ.  ಈ ಚುನಾವಣೆಯಲ್ಲಿ ಮಾಡಲಾಗುತ್ತಿರುವ ಪ್ರತಿಯೊಂದು ಸಭೆ,ಸಮಾರಂಭ ಹಾಗೂ ಪಾದಯಾತ್ರೆಯ ಮಾಹಿತಿ ಮತ್ತು ಚಿತ್ರಗಳು ಇದರಲ್ಲಿ ಲಭ್ಯವಿವೆ.
    ರಾಜಕಾರಣದಲ್ಲಿ ಬದಲಾವಣೆ ತರಲು ಬಯಸಿರುವ ಪ್ರದೀಪಗೌಡ ಮಾಲೀಪಾಟೀಲ್‌ರು ಹೊಸ ತಂತ್ರಜ್ಞಾನದ ಮೂಲಕ ಜನರನ್ನು ತಲುಪಲು ಬಯಸಿದ್ದಾರೆ. ಜನತೆಯೊಂದಿಗೆ ಸರಳ ಸಂವಾದಕ್ಕಾಗಿ ಇದನ್ನು ರೂಪಿಸಲಾಗಿದೆ. ಫೇಸ್‌ಬುಕ್ ನಲ್ಲಿ ಸಹ ಎಲ್ಲ ಮಾಹಿತಿ ಲಭ್ಯವಿದೆ. ಆಸಕ್ತರು pradeepgouda.blogspot.com  ಮತ್ತು ಫೇಸ್‌ಬುಕ್ ನಲ್ಲಿ https://www.facebook.com/pradeepgouda.kavaloorgoudru ಲಾಗಿನ್ ಮಾಡಲು ಕೋರಲಾಗಿದೆ.

ಕ್ಷೇತ್ರದ ಬದಲಾವಣೆಗೆ ಪ್ರದೀಪಗೌಡರಿಗೆ ಬೆಂಬಲಿಸಿ: ಭೂಮರೆಡ್ಡಿ


ಕೊಪ್ಪಳ,ಏ,೦೯: ಕ್ಷೇತ್ರದ ಸಂಪೂರ್ಣ ಬದಲಾವಣೆಗೆ ಅಭಿವೃದ್ಧಿ ಹರಿಕಾರ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ.ಮಾಲಿ ಪಾಟೀಲ್ ರವರಿಗೆ ಬೆಂಬಲಿಸುವಂತೆ ಜೆಡಿಎಸ್  ಪಕ್ಷ ಹಿರಿಯ ಮುಖಂಡ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ಸುರೇಶ ಭೂಮರೆಡ್ಡಿ ಕಾರ್ಯಕರ್ತರಿಗೆ ಕರೆ ನೀಡಿದರು.
ಅವರು ಮಂಗಳವಾರ ನಗರದ ಹೊಸಪೇಟೆ ರಸ್ತೆಯ ಕಾರ್ಗೀಲ್ ಪೆಟ್ರೋಲ್ ಬಂಕ್ ಪಕ್ಕದ ಕವಲೂರು ಲೇಔಟ್‌ನಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ನೂತನ ಪ್ರಚಾರ ಕಾರ್ಯಾಲಯದ ರಿಬ್ಬನ್ ಕಟ್ ಮಾಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು. s
ಮುಂದುವರೆದು ಮಾತನಾಡಿ, ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್‌ರವರಿಗೆ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಅಭಿಮಾನಿಗಳು ಬೆಂಬಲಿಸಿ ಕ್ಷೇತ್ರದಲ್ಲಿ ಬದಲಾವಣೆ ತರಲು ತಾವೇಲ್ಲಾ ಸಹಕರಿಸಬೇಕು. ಪಕ್ಷದ ಪ್ರಾಮಾಣಿಕ ಕಾರ್ಯಕರ್ತರು ತಮ್ಮ ಕ್ಷೇತ್ರಲ್ಲಿಯೇ ಬಿಡುಬಿಟ್ಟು ಪಕ್ಷ ಸಂಘಟನೆಗೆ ಮುಂದಾಬೇಕೆಂದರು. 
ನಂತರ ಅಭ್ಯರ್ಥಿ ಪ್ರದೀಪ್ ಗೌಡ ವಿ. ಮಾಲಿ ಪಾಟೀಲ್ ಮಾತನಾಡಿ, ಕ್ಷೇತ್ರದ ಜನತೆಯ ನಿಸ್ವಾರ್ಥ ಸೇವಾ ಮನೋಭಾವದಿಂದ ರಾಜಕಾರಣಕ್ಕೆ ಬಂದಿದ್ದು ಕ್ಷೇತ್ರದ ಅಭಿವೃದ್ದಿಗಾಗಿ ಈ ಬಾರಿ  ಜನತೆ ಜೆಡಿಎಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಬದಲಾವಣೆಯನ್ನು ತರಬೇಕಿದೆ ಎಂದರು.
 ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷ ಮುಝಾಫರ್ ಷಾ, ರಾಜ್ಯ ಸಂಘಟನಾ ಉಪಾದ್ಯಕ್ಷ ಆರ್. ವಹೀದ್ ಅಹಮ್ಮದ್ ಷಾಹ್, ತಾಲ್ಲೂಕಾಧ್ಯಕ್ಷ ಅಂದಪ್ಪ ಮರೇಬಾಳ,,ಎಸ್. ಟಿ ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ರಮೇಶ ವಣಬಳ್ಳಾರಿ, ಪಕ್ಷದ ಮುಖಂಡರಾದ ವಿರೇಶ್‌ಮಹಾಂತಯ್ಯನಮಠ್, ಎಂ.ಡಿ.ಹುಸೇನ ಮಾಸ್ಟರ್, ನಗರ ಸಭೆ ಸದಸ್ಯರಾದ ಚನ್ನಪ್ಪ ಕೋಟ್ಯಾಳ್, ಮಿನಾಕ್ಷಮ್ಮ ಬನ್ನಿಕೊಪ್ಪ, ಖಾಜಾವಲಿ ಬನ್ನಿಕೊಪ್ಪ, ನಗರ ಯುವ ಘಟಕದ ಅಧ್ಯಕ್ಷ ಸೈಯದ್ ಮಹೆಮುದ್ ಹುಸೇನಿ,  ಸಿದ್ದೇಶ್ ದದೇಗಲ್,ಶಿವರಾಮ್ ಗಬ್ಬೂರ,ಕೋಟ್ರಪ್ಪ ಕೋರ್ಲಳ್ಳಿ, ಮಂಜುನಾಥ್ ಗಡ್ಡದ್, ವೆಂಕಟೇಶ ಬೆಲ್ಲದ್, ಅಮರೇಶ ಮುರುಳಿ, ವಿಜಯಕುಮಾರ ಬಿಸರಳ್ಳಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಇದೇ ವೇಳೆ ಗ್ರಾಮೀಣ ಪ್ರದೇಶಗಳಿಂದ ಆಗಮಿಸಿದ ನೂರಾರು ಜನ ವಿವಿಧ ಪಕ್ಷ ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು. 

ವಿವಿಧ ಪಕ್ಷಗಳ ಮುಖಂಡರು ಜೆಡಿಎಸ್ ಸೇರ್ಪಡೆ

ಬಿಎಸ್‌ಆರ್ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ
ಕೊಪ್ಪಳ,ಏ,೦೯: ತಾಲೂಕಿನ ಹಿಟ್ನಾಳ ಗ್ರಾಮದ ಹಾಗೂ ಹೋಬಳಿ ವ್ಯಾಪ್ತಿಯ ಬಿಎಸ್‌ಆರ್ ಕಾಂಗ್ರೆಸ್ ಪಕ್ಷ ವಿವಿಧ ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಹೆಚ್. ರಮೇಶ ಒಣಬಳ್ಳಾರಿ ಹಾಗೂ ನಗರ ಘಟಕದ ಅಧ್ಯಕ್ಷ ಸೈಯ್ಯದ್ ಮಹೆಮುದ್ ಹುಸೇನಿ ನೇತೃತ್ವದಲ್ಲಿ ಜೆಡಿಎಸ್ ಮುಖಂಡ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ಸುರೇಶ ಭೂಮರೆಡ್ಡಿ ಹಾಗೂ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್‌ರವರ ಸಮ್ಮುಖದಲ್ಲಿ ಅಧಿಕೃತವಾಗಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.
ಹಿಟ್ನಾಳ ಗ್ರಾಮದ ಅಲ್ಲಾ ಬಕ್ಷಿ, ಅನಿಲ್ ಕುಮಾರ, ನಾಗಲಿಂಗಪ್ಪ, ಕಾಶಿನಾಥ, ಖಾಜಾವಲಿ, ಅಶೋಕ, ಕಿಶೋರ, ಪ್ರಭು, ಶೇಕ್ಷಾವಲಿ, ಗಣೇಶ, ಕೇಶಣ್ಣ, ಶರೀಫ್, ಸೋಮಣ್ಣ, ಸುರ್ಯ, ಚಾಂದ್‌ಪಾಷಾ, ಮಾರುತಿ, ಬಾಷಾ ಸೇರಿದಂತೆ ಇತರರು ಪಕ್ಷ ಸೇರ್ಪಡೆಗೊಂಡರು.

ಕೊಪ್ಪಳ,ಏ,೦೯: ಕ್ಷೇತ್ರದ ಸಂಪೂರ್ಣ ಬದಲಾವಣೆಗೆ ಬೆಂಬಲಿಸಿ ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮೀಣ ಪ್ರದೇಶಗಳ ಕಾಂಗ್ರೆಸ್, ಬಿಜೆಪಿ ಮತ್ತು ಬಿಎಸ್‌ಆರ್ ಕಾಂಗ್ರೆಸ್ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಜೆಡಿಎಸ್ ಮುಖಂಡ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ಸುರೇಶ ಭೂಮರೆಡ್ಡಿ ಹಾಗೂ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್‌ರವರ ಸಮ್ಮುಖದಲ್ಲಿ ಅಧಿಕೃತವಾಗಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷ ಮುಝಾಫರ್ ಷಾ, ರಾಜ್ಯ ಸಂಘಟನಾ ಉಪಾದ್ಯಕ್ಷ ಆರ್. ವಹೀದ್ ಅಹಮ್ಮದ್ ಷಾಹ್, ತಾಲ್ಲೂಕಾಧ್ಯಕ್ಷ ಅಂದಪ್ಪ ಮರೇಬಾಳ,,ಎಸ್. ಟಿ ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ರಮೇಶ ವಣಬಳ್ಳಾರಿ, ಪಕ್ಷದ ಮುಖಂಡರಾದ ವಿರೇಶ್‌ಮಹಾಂತಯ್ಯನಮಠ್, ಎಂ.ಡಿ.ಹುಸೇನ ಮಾಸ್ಟರ್, ನಗರ ಸಭೆ ಸದಸ್ಯರಾದ ಚನ್ನಪ್ಪ ಕೋಟ್ಯಾಳ್, ಮಿನಾಕ್ಷಮ್ಮ ಬನ್ನಿಕೊಪ್ಪ, ಖಾಜಾವಲಿ ಬನ್ನಿಕೊಪ್ಪ, ನಗರ ಯುವ ಘಟಕದ ಅಧ್ಯಕ್ಷ ಸೈಯದ್ ಮಹೆಮುದ್ ಹುಸೇನಿ,  ಸಿದ್ದೇಶ್ ದದೇಗಲ್,ಶಿವರಾಮ್ ಗಬ್ಬೂರ,ಕೋಟ್ರಪ್ಪ ಕೋರ್ಲಳ್ಳಿ, ಮಂಜುನಾಥ್ ಗಡ್ಡದ್, ವೆಂಕಟೇಶ ಬೆಲ್ಲದ್, ಅಮರೇಶ ಮುರುಳಿ, ವಿಜಯಕುಮಾರ ಬಿಸರಳ್ಳಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.





.

Sunday, April 7, 2013

ಜೆಡಿಎಸ್ ಪಕ್ಷದ ಪ್ರಚಾರ ಕಾರ್ಯಾಲಯ ಉದ್ಘಾಟನೆ

 ಕೊಪ್ಪಳ, ಏ.೦೭: ನಗರ ಹೊರವಲಯದ ಹೊಸಪೇಟೆ ರಸ್ತೆಯ ಕಾರ್ಗಿಲ್ ಪೆಟ್ರೋಲ್ ಬಂಕ್  ಪಕ್ಕದ ಕವಲೂರು ಲೇಔಟ್‌ನಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಪ್ರಚಾರ ಕಾರ್ಯಾಲಯ ಉದ್ಘಾಟನೆ ಇದೇ ದಿ. ೯ ರಂದು ಬೆಳಿಗ್ಗೆ ೧೦.೦೦ ಗಂಟೆಗೆ ನೇರವೇರಲಿದೆ.
ಕಾರ್ಯಾಲಯದ ಉದ್ಘಾಟನೆಯಲ್ಲಿ ಮಾಜಿ ಸಚಿವ,  ಪಕ್ಷದ ಹೈ-ಕ ವಿಭಾಗ ಉಸ್ತುವಾರಿ ವಹಿಸಿರುವ ಇಕ್ಬಾಲ್ ಅನ್ಸಾರಿ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಡಿ. ಖಾದ್ರಿ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್, ತಾಲೂಕಾಧ್ಯಕ್ಷ ಅಂದಪ್ಪ ಮರೆಬಾಳ, ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಯುವ ಘಟಕ ಜಿಲ್ಲಾಧ್ಯಕ್ಷ ಹೆಚ್. ರಮೇಶ ಓಳಬಳ್ಳಾರಿ ಸೇರಿದಂತೆ ಪಕ್ಷದ ಹಿರಿಯ ಮುಖಂಡರು, ಜನಪ್ರತಿನಿಧಿಗಳು, ಪ್ರಮುಖ ಕಾರ್ಯಕರ್ತರು  ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.

ಭಾಗ್ಯನಗರ: ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆ




ಕೊಪ್ಪಳ, ಏ.೦೭: ಸಮೀಪದ ಭಾಗ್ಯನಗರ ಗ್ರಾಮದ ಬಿಜೆಪಿಯ ವಿವಿಧ ಮುಖಂಡರು ರವಿವಾರ ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್ ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಪಕ್ಷದ ರಾಷ್ಟ್ರೀಯ ನಾಯಕ ಹೆಚ್.ಡಿ. ದೇವೇಗೌಡ, ರಾಜ್ಯಾಧ್ಯಕ್ಷ ಹಾಗೂ ಜನಾನುರಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹಾಗೂ ಕ್ಷೇತ್ರದ ಪ್ರಗತಿಪರ ಚಿಂತನೆಯ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿಪಾಟೀಲ್ ರವರ ನಾಯಕತ್ವಕ್ಕೆ ನೆಚ್ಚಿ ಬಿಜೆಪಿ ಪಕ್ಷ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಗೊಳ್ಳುತ್ತಿರುವುದಾಗಿ ತೊಂಡಪ್ಪ ದಲಬಂಜನ್, ಕನಕಾಚಲ ದಲಬಂಜನ್, ಪದ್ಮಸಾಲಿ ಸಮಾಜದ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಏಕಪ್ಪ ದೇವದುರ್ಗ, ಶಾಂತಮ್ಮ ಬಾವಿಕಟ್ಟಿ ಮತ್ತು ಶರಣಮ್ಮ ನೇತೃತ್ವದ ಮಹಿಳಾ ಗುಂಪಿನ ಸದಸ್ಯರು ಪಕ್ಷ ಸೇರ್ಪಡೆ ಸಂದರ್ಭದಲ್ಲಿ ತಿಳಿಸಿದರು. ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿಪಾಟೀಲ್ ಪ್ರತಿ ಮುಖಂಡ ಮನೆ ಮನೆಗೆ ತೇರಳಿ ಅವರಿಗೆ ಪಕ್ಷದ ಶಾಲು ಮತ್ತು ಹೂಮಾಲೆ ಹಾಕುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಪಕ್ಷದ ತಾಲೂಕಾಧ್ಯಕ್ಷ ಅಂದಪ್ಪ ಮರೆಬಾಳ, ಮುಖಂಡರಾದ ವಿರೇಶ ಮಾಹಾಂತಯ್ಯನಮಠ, ಎಂ.ಡಿ. ಹುಸೇನ್ ಮಾಸ್ಟರ್, ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ರಾಜು ಹಲಗೇರಿ, ಮಂಜುನಾಥ ಗಡ್ಡದ್, ರಾಮಚಂದ್ರಪ್ಪ ಚಳಮಠದ, ಶಶಿಧರ ಹುರಕಡ್ಲಿ, ಮಂಜುನಾಥ ಶ್ಯಾವಿ, ರಾಮಚಂದ್ರಪ್ಪ ಅಡ್ಡೇದಾರ, ವಸಂತ ಶ್ಯಾವಿ, ರವಿ ಬಂಗಾಳಿ, ತೊಂಡುಸಾ ದಲಬಂಜನ್, ನೀಲಕಂಠಪ್ಪ ಮ್ಯಾಳಿ, ಸಿದ್ದಪ್ಪ ಗೊಂಬಿ, ಮಲ್ಲಿಕಾರ್ಜುನ ಎಸ್., ರಾಜು ಪುರಾಣಿಕಮಠ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Wednesday, April 3, 2013

ಗ್ರಾಮೀಣ ಪ್ರದೇಶದಲ್ಲಿ ಪಕ್ಷದ ಕಟ್ಟಾಭಿಮಾನಿ ಕಾರ್ಯಕರ್ತರಿದ್ದಾರೆ: ಪ್ರದೀಪಗೌಡ



ಕಳೆದ ಮೂರು ದಿನಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಸಂಚಾರ ನಡೆಸಿದ್ದು ಎಲ್ಲೆಡೆ ಪಕ್ಷದ ಕಟ್ಟಾಭಿಮಾನಿ ಕಾರ್ಯಕರ್ತರಿದ್ದಾರೆ. ಅವರ ದೃಢಸಂಕಲ್ಪ ನನಗೆ ಅಚ್ಚರಿ ಮೂಡಿಸಿದೆ ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಪ್ರದೀಪಗೌಡ ಮಾ.ಪಾಟೀಲ್ ಹೇಳಿದರು.
ಅವರು ಬುಧವಾರ ಮುನಿರಾಬಾದ್ ಸಿಮಾ ವ್ಯಾಪ್ತಿಯ ಅಗಳಕೇರ, ಹೊಸ ಶಿವಪುರ, ಹೊಸುರು ಹಾಗೂ ಮುನಿರಾಬಾದ್ ಗ್ರಾಮಗಳಲ್ಲಿ ತಮ್ಮ ಹಳೆ ಕಾರ್ಯಕರ್ತರನ್ನು ಭೇಟಿ ಅವರ ದಿಟ್ಟ ನಿಲುವು ಹಾಗೂ ಅಭಿಮಾನ ಕಂಡು ಆಶ್ಚರ್ಯಗೊಂಡರು. ನಂತರ ಮುನಿರಾಬಾದ್‌ನಲ್ಲಿ ಕಾರ್ಯಕರ್ತ ಮುಖಂಡರೊಂದಿಗೆ ಮಾತನಾಡಿ, ಈ ಹಿಂದೆ ಉಪಚುನಾವಣೆಯಲ್ಲಿ ಆದ ಅವಸರದ ಅವಘಡಗಳನ್ನು ಮನ್ನಿಸಿ ತಾವೇಲ್ಲಾ ಅಭಿಮಾನದಿಂದ ಪಕ್ಷ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿರುವುದು ಸಂತೋಷ ತಂದಿದೆ. ಅದೇ ರೀತಿ ಕಾರ್ಯಕರ್ತರು ತಮ್ಮ ತಮ್ಮ ಪ್ರದೇಶಗಳಲ್ಲಿಯೇ ಇದ್ದು ಪಕ್ಷದ ಬೇರುಮಟ್ಟದ ಅಭಿಮಾನಿ ಜನತೆಗೆ ಅಭ್ಯರ್ಥಿ ಹಾಗೂ ಪಕ್ಷದ ಧೇಯುದ್ದೇಶಗಳನ್ನು ತಿಳಿಸಬೇಕಿದೆ ಎಂದು ಮನವಿ ಮಾಡಿದರು.
ನಾನು ಯಾವುದೇ ಅಧಿಕಾರದ ಆಮಿಷ್ಯಕ್ಕಾಗಿ ಬಿಸಿಲುಗುದರೆ ಬೆನ್ನುಹತ್ತಿಲ್ಲ, ನೀವು ನೀಡಿದ. ನಿಮ್ಮ ಅಧಿಕಾರ ಎಂದರೆ ಏನು? ಎಂಬುದನ್ನು ನನ್ನಿಂದ ಸಾಬೀತು ಪಡಿಸಲು ಚುನಾವಣೆಗಿಳಿದಿದ್ದೇನೆ. ನನ್ನದು ಅಭಿವೃದ್ಧಿ ಕಾರ್ಯವಾದರೆ ಅಧಿಕಾರ ನಿಮ್ಮ ಕೈಯಲ್ಲಿಯೇ ಇರುತ್ತದೆ ಎಂಬುದನ್ನು ಸಾಧಿಸಿ ತೋರಿಸುತ್ತೇನೆ. ಕಿಲ್ಲೇದರ ಮನೆತನದ ಕವಲೂರು ಗೌಡರ್ ಎಂಬ ಖ್ಯಾತಿಗೆ ಚ್ಯುತಿ ಬರದಂತೆ ನಡೆದುಕೊಂಡು ಬಂದಿದ್ದು ಮುಂದೆಯೂ ಅದೇ ಗೌರವಯುತವಾಗಿ ಬಾಳುವೇ ಕ್ಷೇತ್ರದ ಜನತೆ ನಮ್ಮ ಗ್ರಾಮದ ಜನತೆ ಎಂಬಂತೆ ಕಾಣುವುದಾಗಿ ಭರವಸೆ ನೀಡಿ ಅದಕ್ಕೆ ತಾವೇಲ್ಲಾ ಅವಕಾಶ ನೀಡುವಿರೆಂದು ನಂಬಿರುವೆ ಎಂದು ಗೌಡರು ಬಾವುಕರಾಗಿ  ಮಾತನಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಹಿರಿಯ ಮುಖಂಡರಾದ ಎಂ.ಬಿ. ಹುಸೇನ್ ಮಾಸ್ಟರ್, ಕೊಟ್ರಪ್ಪ,  ನ್ಯಾಯವಾದಿ ಆರ್. ಎಂ. ಕಿಲ್ಲೇದರ್, ಆರೀಫ್, ಪಕ್ಷದ ತಾಲೂಕಾಧ್ಯಕ್ಷ ಅಂದಪ್ಪ ಮರೇಬಾಳ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಿ.ಹೆಚ್. ರಮೇಶ ಓನಬಳ್ಳಾರಿ, ಬುಲ್ಲುಸಾಬ, ಸುರೇಂದ್ರ, ನರಸರಡ್ಡಿ, ಜಾಫರ್ ಷಾ, ಆರೀಫ್,  ರಾಜು ಹಲಗೇರಿ, ಇಸೂಫ್‌ಖಾನ್, ವೆಂಕಟೇಶ ಬೆಲ್ಲದ್, ಮಂಜುನಾಥ ಗಡ್ಡದ್, ನಾನಿ, ಮರಿಯಪ್ಪ ಗುಡದಳ್ಳಿ, ರಾಜಶೇಖರ ನಾಯಕ, ಮಹಿಬೂಬ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಳೆದ ಚುನಾವಣೆಯ ಹೋರಾಟದ ಚಿತ್ರಗಳು