Wednesday, April 3, 2013

ಆಗರ್ಭ ಶ್ರೀಮಂತ ಕುಟುಂಬದ ಪ್ರದೀಪಗೌಡ (ಕವಲೂರಗೌಡ್ರ)


ಜೆಡಿಎಸ್ ಅಭ್ಯರ್ಥಿಯಾಗಿರುವ ಕವಲೂರಿನ ಪ್ರದೀಪಗೌಡ ವಿ.ಮಾಲಿಪಾಟೀಲರದು ಜಮೀನ್ದಾರಿ ಕುಟುಂಬ. ಚಾರಿತ್ರಿಕ ಮಹತ್ವವುಳ್ಳ ಕವಲೂರಿನ ಬೃಹತ್ ಕಿಲ್ಲೆಯ ಒಡೆಯರಾಗಿರುವ ಪ್ರದೀಪಗೌಡರದು ಮೊದಲಿನಿಂದಲೂ ಆಗರ್ಭ ಶ್ರೀಮಂತ ಕುಟುಂಬ.
ಇವರ ತಂದೆ ವಿರೂಪಾಕ್ಷಗೌಡರು ಈ ಹಿಂದೆ ೬೦ ರ ದಶಕದಲ್ಲಿಯೇ ಕೊಪ್ಪಳ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾಯಿತರಾಗಿದ್ದರು.
ಕವಲೂರು, ಅಳವಂಡಿ, ಗುಡಗೇರಿ, ಘಟ್ಟಿರೆಡ್ಡಿಹಾಳ, ಮತ್ತಿತರ ಸುತ್ತಲಿನ ಗ್ರಾಮಗಳಲ್ಲಿ ಕವಲೂರು ಕಿಲ್ಲೆ ಗೌಡರ ಕುಟುಂಬ ಎಂದೇ ಹೆಸರು ಗಳಿಸಿರುವ ಈ ಮನೆತನದ ಗತವೈಭವಕ್ಕೆ ಸಾಕ್ಷಿಯಾಗಿ ಇಂದಿಗೂ ಸಾರಿ ಹೇಳುವಂತಿರುವ ಕವಲೂರಿನ ಪ್ರದೀಪಗೌಡ ವಿ.ಮಾಲಿಪಾಟೀಲರ ಕಿಲ್ಲೆಯೊಳಗೊಂದು ನೋಟ ಬೀರೋಣ.
ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಮಾಲಿಪಾಟೀಲರು, ದೇಶಪಾಂಡೆಯವರು, ದೇಸಾಯಿಯವರು ಎಂದರೆ ಒಂದಷ್ಟು ಹಳ್ಳಿಗಳ ಸಮೂಹದ ದಂಡಾಧಿಕಾರಿಗಳಂತೆ ಕೆಲಸ ಮಾಡುತ್ತಿದ್ದರು.
ಇವರು ವಾಸಿಸುವ ಮನೆಗಳು ವಿಶಾಲವಾಗಿದ್ದು, ಅಚ್ಚುಕಟ್ಟಾದ ಎಲ್ಲ ಸೌಕರ್ಯಗಳನ್ನು ಒಳಗೊಂಡಿರುತ್ತಿದ್ದವು. ಕಿಲ್ಲೆ,ವಾಡೆ, ದೇಶಗತಿ ಎಂದು ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತವೆ.
ಕೋಟೆಯನ್ನೇ ಹೋಲುವ ಇಂತಹ ಐತಿಹಾಸಿಕ ಕಿಲ್ಲೆಯೊಂದು ಕೊಪ್ಪಳ ಜಿಲ್ಲೆಯ ಕವಲೂರು ಗ್ರಾಮದಲ್ಲಿದೆ.
ಸುಮಾರು ೩ ಎಕರೆಯಷ್ಟು ವಿಸ್ತಾರವಾಗಿರುವ ಕವಲೂರು ಮಾಲಿಪಾಟೀಲರ ಕಿಲ್ಲೆ, ಸುಮಾರು ೫ ರಿಂದ ೬ ನೂರು ವರ್ಷಗಳಷ್ಟು ಹಿಂದೆ ನಿರ್ಮಾಣಗೊಂಡಿರಬಹುದಾಗಿದೆ. ಬಡಿಗೇರರ, ಕುಲುಮಿ, ಹಕ್ಕಿಗೂಡು, ಶಾಸನ, ದೇವಸ್ಥಾನ, ನ್ಯಾಯಕಟ್ಟೆ, ಎಲ್ಲವನ್ನು ಒಳಗೊಂಡಿರುವ ಈ ಭವ್ಯ ಕಿಲ್ಲೆಯನ್ನು ಒಮ್ಮೆ ನೋಡಲೇಬೇಕು.

0 comments:

Post a Comment