Wednesday, April 3, 2013

ಪ್ರದೀಪಗೌಡ ಮಾಲಿಪಾಟೀಲರ ಕವಲೂರಿನ ಕಿಲ್ಲೆಯೊಳಗೊಂದು ಸುತ್ತು

ಕೊಪ್ಪಳ ತಾಲೂಕಿನ ಗಡಿಭಾಗದ ಕವಲೂರು ಮುಂಡರಗಿಗೆ ಸಮೀಪ ದಲ್ಲಿರುವ ಒಂದು ಹೋಬಳಿ ಕೇಂದ್ರ.











ಇಲ್ಲಿ ಇರುವ ಮಾಲಿ ಪಾಟೀಲ ಮನೆತನ ಒಂದು ಕಾಲದಲ್ಲಿ ರಾಜರಂತೆ ಬದುಕಿದ ಶ್ರೀಮಂತ ಕುಟುಂಬ. ಕಿಲ್ಲೆ ಕೋಟೆಯಲ್ಲಿ ಈ ಕುಟುಂಬ ವಾಸಿಸು ವದರಿಂದ ಕಿಲ್ಲೆಗೌಡ ರೆಂದೇ ಕೊಪ್ಪಳ ಭಾಗದಲ್ಲಿ ಚಿರಪರಿಚಿತ.
ಕವಲೂರಿನ ಮಾಲಿ ಪಾಟೀಲರ ಮನೆ ಸುಮಾರು ೩ ಎಕರೆಯಷ್ಟು ವಿಸ್ತಾರವಿರುವ ಬೃಹತ್ ಕಿಲ್ಲೆ.

ನೂರಾರು ಕೊಠಡಿಗಳು, ಅಡುಗೆಮನೆ, ಪ್ರಾಂಗಣ, ನ್ಯಾಯದಾನ ಮಾಡುವ ಕಟ್ಟೆ, ಬದಾಮಿ ಕಲ್ಲಿನಿಂದ ನಿರ್ಮಿಸಿ ರುವ ಸುಂದರ ದ್ವಾರಗಳು, ಕಾಷ್ಠ ಶಿಲ್ಪದಲ್ಲಿ ಅಲಂಕೃತಗೊಂಡಿ ರುವ ದೇವಾಲಯ, ಮನೆತನದ ಹಿನ್ನೆಲೆ ಸಾರುವ ಶಾಸನ, ಕಣಜಗಳು, ಬಡಿಗೇರರ ಕುಲುಮೆ, ಎಲ್ಲವೂ ಈ ಒಂದೇ ಮನೆಯಲ್ಲಿವೇ.
ಕವಲೂರಿನ ಮಾಲಿ ಪಾಟೀಲ ಕುಟುಂಬ ಮೂಲತ: ವಿಜಾಪುರ ಜಿಲ್ಲೆ ಪರ್ವತ ಪಾನಗಲ್ ಗ್ರಾಮದವರು. ದೆಹಲಿಯ ಸುಲ್ತಾನರು ದಕ್ಷಿಣ ಭಾರತದ ಮೇಲೆ ದಾಳಿ ನಡೆಸಿದ ಸಮಯದಲ್ಲಿ ಈ ಕುಟುಂಬ ಭೀಮಾ ನದಿ ದಾಟಿ ಮೊದಲು ಬೀಳಗಿಗೆ ವಲಸೆ ಬಂದು ಅಲ್ಲಿ ಗೌಡಕಿ ಪಡೆಯಿತು. ಕಾಲಾಂತರ ದಲ್ಲಿ ಕೊಪ್ಪಳ ತಾಲೂಕಿನ ಕವಲೂರು ಗ್ರಾಮಕ್ಕೆ ಬಂದು ನೆಲೆ ನಿಂತರು.
ಬ್ರಾಹ್ಮಣ ದೇಸಾಯಿಯ ವರು ನಿರ್ಮಿಸಿದ್ದ ಕವಲೂರಿನ ಕಿಲ್ಲೆ ಯನ್ನು ಬೀಳಗಿಯಿಂದ ಬಂದ ಮಲ್ಲರೆಡ್ಡಿಗೌಡ ಖರೀದಿ ಸಿದ್ದರು ಎಂದು ಮಾಲಿ ಪಾಟೀಲ ಮನೆತನದ ವಾರಸುದಾರರು ತಿಳಿಸುತ್ತಾರೆ.
ದಕ್ಷಿಣಾಭಿಮುಖವಾಗಿರುವ ಕಿಲ್ಲೆಯ ಮಹಾದ್ವಾರವೇ ಅದರ ಶ್ರೀಮಂತಿಕೆಯನ್ನು ಸಾರಿ ಹೇಳುವಂತಿದೆ. ಕೋಟೆಯ ಸುತ್ತ ಮೂರು ವೀಕ್ಷಣಾ ಗೋಪುರಗಳಿವೆ.
ಕಿಲ್ಲೆಯ ಮೊದಲ ಪ್ರಾಂಗಣ ದಲ್ಲಿ ಮಾಲಿಪಾಟೀಲ ಮನೆ ತನದ ಕೃಷಿ ಸಾಮಗ್ರಿಗಳು, ಉತ್ಪನ್ನಗಳ ಸಂಗ್ರಹವನ್ನು ದಾಸ್ತಾನು ಮಾಡಲು ವ್ಯವಸ್ಥೆ ಇದೆ.
ಕಿಲ್ಲೆಗೌಡರ ಕೃಷಿ ಉಪ ಕರಣಗಳ ನಿರ್ಮಾಣಕ್ಕಾಗಿಯೇ ಪ್ರತ್ಯೇಕವಾಗಿ ಬಡಿಗತನ, ಕಮ್ಮಾರಿಕೆಗೂ ಇಲ್ಲಿ ಕುಲುಮೆ ಗಳಿರುವದು ಗಮನ ಸೆಳೆಯುತ್ತದೆ.
ಪಾರಿವಾಳ, ಮತ್ತಿತರ ಪಕ್ಷಿಗಳ ಪ್ರೇಮಿಗಳಾಗಿದ್ದ ಕಿಲ್ಲೆಗೌಡರು ಒಳ ಆವರಣದಲ್ಲಿ ಹಕ್ಕಿಗೂಡು ನಿರ್ಮಿಸಿದ್ದರು.
ಕಿಲ್ಲೆಯ ಪ್ರತಿಯೊಂದು ಬೃಹತ್ ದ್ವಾರದ ಬಳಿಯೂ ಒಂದು ಚಿಕ್ಕ ಬಾಗಿಲನ್ನು ಇಡಲಾಗಿದೆ. ಸಂಜೆಯಾದ ಬಳಿಕ ದೊಡ್ಡ ದ್ವಾರವನ್ನು ಮುಚ್ಚಿ ಚಿಕ್ಕ ಬಾಗಿಲುಗಳನ್ನು ಬಳಸಲಾಗುತ್ತಿತ್ತು.
ಇತ್ತೀಚಿನ ತಲೆಮಾರಿನವರು ೧೯೨೯ ರಲ್ಲಿ ಬದಾಮಿ ಕಲ್ಲು ಬಳಸಿ, ನಿರ್ಮಿಸಿರುವ ಸುಂದರ ದ್ವಾರದಲ್ಲಿ ಇರಿಸಲಾಗಿರುವ ಫಲಕದಲ್ಲಿ ಕೊಪ್ಪಳ ಜಿಲ್ಲೆ ಎಂದು ನಮೂದಿಸಲಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಿಜಾಮಶಾಹಿ ಆಡಳಿತದಲ್ಲಿಯೇ ಕೊಪ್ಪಳ ಜಿಲ್ಲೆಯಾಗಿತ್ತೆಂಬುದಕ್ಕೆ ಇದು ಸಾಕ್ಷಿ ಒದಗಿಸುತ್ತದೆ. 
ರಾಶಿ ಮಾಡಿದ ಧಾನ್ಯಗಳ ಚೀಲಗಳ ದಾಸ್ತಾನಕ್ಕೆ ಪ್ರತ್ಯೇಕ ಮನೆ, ಕಣಜಗಳು ಇಲ್ಲಿವೆ. ಸುಂದೂಕಗಳೆಂದು ಕರೆಯಲ್ಪ ಡುವ ಹಲವಾರು ದೊಡ್ಡ ಪೆಟ್ಟಿಗೆ ಗಳು ಇಂದಿಗೂ ಬಳಕೆಯಲ್ಲಿವೆ.
ಕವಲೂರು ಗೌಡರ ಕಿಲ್ಲೆ ಯಲ್ಲಿ ಒಂದು ಬೃಹತ್ ಶಿಲಾ ಶಾಸನವಿದೆ. ಸಂಶೋಧಕರು ಈ ಶಾಸನವನ್ನು ಅಧ್ಯಯನ ಮಾಡಿ ದರೆ ಮಹತ್ವದ ಅಂಶಗಳು ಬೆಳಕಿಗೆ ಬರಬಹುದು.
ಕಿಲ್ಲೆಯ ಗೌಡರಿಗಾಗಿಯೇ ಈ ಮನೆಯಲ್ಲಿ ಒಂದು ದೇವಾ ಲಯ ಇದೆ. ಸುಂದರವಾದ ಕಾಷ್ಠ ಶಿಲ್ಪದ ಅಲಂಕೃತಗೊಂಡಿ ರುವ ಹರಿಹರೇಶ್ವರ ದೇವಾ ಲಯ. ಒಂದು ಪ್ರಮುಖ ಆಕರ್ಷಣೆಯಾಗಿದೆ. ಕಾರ್ತಿಕ ಮಾಸದಲ್ಲಿ ಸಾರ್ವಜನಿಕವಾಗಿ ಹರಿಹರೇಶ್ವರನ ಕಾರ್ತಿಕೋತ್ಸವ ನಡೆಸಿಕೊಂಡು ಬರುವ ಪರಂಪರೆ ಈಗಲು ಮುಂದುವರೆಯುತ್ತದೆ.
ಅರಮನೆಯನ್ನೇ ಹೋಲುವ ಕಿಲ್ಲೆಯಲ್ಲಿ ವೈಭವೋಪೇತವಾದ ದೀಪಗಳು, ಜೋಕಾಲಿಗಳು ಚಿತ್ತಾರದ ವಸ್ತುಗಳಿವೆ.
ಆ ಕಾಲದಲ್ಲಿ ಸಾವಿರಾರು ಎಕರೆ ಜಮೀನು ಹೊಂದಿದ್ದ ಕವಲೂರು ಗೌಡರ ಕಿಲ್ಲೆಯಲ್ಲಿ ದನದ  ಕೊಟ್ಟಿಗೆ, ಮೇವು ಸಂಗ್ರಹಣೆಯ ಸ್ಥಳವೇ ಸುಮಾರು ಒಂದು ಎಕರೆಯಷ್ಟಿದೆ.
ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದ ಸಮಯದಲ್ಲಿ ಜಾರಿ ಬಂದ 'ಊಳುವವನೇ ಭೂಮಿಯ ಒಡೆಯ' ಕಾಯ್ದೆ ಯಡಿ ಇವರ ಭೂಮಿ ಹಂಚಿ ಹೋದುದುದರಿಂದ ಈಗ ಸುಮಾರು ಐದುನೂರು ಎಕರೆಗೂ ಅಧಿಕ ಭೂಮಿ ಉಳಿದಿದೆ. ಲಕ್ಷಾಂತರ ರೂಪಾಯಿ ಬೆಲೆಬಾಳುವ ಹಲವಾರು ಎತ್ತುಗಳಿವೆ. ಕಿಲ್ಲೆಯ ನಿತ್ಯದ ಕೆಲಸ-ಕಾರ್ಯಗಳಿಗಾಗಿ ನೂರಾರು ಆಳುಗಳಿದ್ದಾರೆ.
ಕಿಲ್ಲೆಯ ಹಲವು ಕಟ್ಟಡ ಗಳನ್ನು ಸಮರ್ಪಕವಾಗಿ ನಿರ್ವಹಿಸಲಾಗದೇ ಇದ್ದುದ ರಿಂದ ಕೆಲವು ಭಾಗ ನಾಶವಾಗಿದೆ. ಕವಲೂರು ಗೌಡರಿ ಕಿಲ್ಲೆಯ ನಿರ್ವಹಣೆಗೆ ಪ್ರತಿವರ್ಷ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ.
ಇತ್ತೀಚಿನ ದಿನಗಳಲ್ಲಿ ಮಾಲಿಪಾಟೀಲ ಮನೆತನದ ಹಲವು ಸದಸ್ಯರು ವಿದ್ಯಾವಂತ ರಾಗಿ, ಬೆಂಗಳೂರು ಸೇರಿರು ವದರಿಂದ ಕವಲೂರಿ ನಲ್ಲಿರುವ ಜಗಧೀಶ್ವರಗೌಡ ಬಸನಗೌಡ ಹಾಗೂ ಪ್ರದೀಪಗೌಡ ಕಿಲ್ಲೆಯ ಪರಂಪರೆ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
ನಮ್ಮ ಇತಿಹಾಸದ ಪ್ರಮುಖ ಸ್ಮಾರಕಗಳಾಗಿರುವ ಇಂತಹ ಕಿಲ್ಲೆಗಳ ರಕ್ಷಣೆ ಅತ್ಯಗತ್ಯವಾಗಿದೆ

1 comments:

Unknown said...

ಪರ್ಬತ ಪಾನಗಲ್ ಎಲ್ಲಿದೆ? ಮತ್ತು ಆ ಊರಿನ ಈಗಿನ ಹೆಸರು ಏನು? ಯಾ ತಾಲೂಕಿನಲ್ಲಿ ಬರುತ್ತೆ?

Post a Comment