Saturday, April 13, 2013

ಕಾಂಗ್ರೆಸ್,ಬಿಜೆಪಿ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆ


ಕೊಪ್ಪಳ, ಏ.೧೩: ತಾಲೂಕಿನ ಬೇಳೂರು ಗ್ರಾಮದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ  ಮುಖಂಡರಗಳ ವರ್ತನೆಗಳಿಂದ ಬೇಸರಗೊಂಡು ನೂರಾರು ಕಾರ್ಯಕರ್ತರು ಹಾಗೂ ಮುಖಂಡರು ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್‌ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು. 
ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್‌ರವರ ಸಮ್ಮುಖದಲ್ಲಿ ಮುಖಂಡರಾದ ರಮೇಶ ಎಂ. ಗುಡ್ಲಾನೂರು, ಪಕೀರಗೌಡ್ರ, ಮಂದಿನಗೌಡ್ರ, ಡಾ. ಮಲ್ಲಿಕಾರ್ಜುನ ಪಕೀರಪ್ಪ ಸುಣಗಾರ, ಕಾಮಣ್ಣ, ನಿಂಗಜ್ಜ ತಳವಾರ, ಗವಿಸಿದ್ದಪ್ಪ ತಳವಾರ ಇತರ ಮುಖಂಡರ ನೇತೃತ್ವದಲ್ಲಿ ಮುದೇಪ್ಪ, ನೀಲಪ್ಪ, ಹನುಮಪ್ಪ, ಯಗಪ್ಪ, ಗಾಳೆಪ್ಪ, ಪಕೀರಪ್ಪ, ದುರಗಪ್ಪ, ದ್ಯಾವಪ್ಪ, ಯಲ್ಲಪ್ಪ, ಸಣ್ಣ ದೇವಪ್ಪ, ನಿಂಗಪ್ಪ, ಕುಂಗ ಹನುಮಪ್ಪ, ರಾಮಪ್ಪ, ಯಮನೂರಪ್ಪ, ಗಾಳಿ ದುರಗಪ್ಪ, ಬಸವರಾಜ ಮಾದಣ್ಣವರ್, ಯಲ್ಲಪ್ಪ ಮಾದಣ್ಣನವರ್, ರಮೇಶ ದೊಡ್ಡಮನಿ ಸೇರಿದಂತೆ ನೂರಾರು ಕಾರ್ಯಕರ್ತರು ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು. 
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತಾಲ್ಲೂಕಾಧ್ಯಕ್ಷ ಅಂದಪ್ಪ ಮರೇಬಾಳ, ಕಾರ್ಯದರ್ಶಿ ಶೇಖಪ್ಪ ಲಕ್ಷಾಣಿ, ಎಸ್. ಟಿ ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಹೆಚ್.ರಮೇಶ ವಣಬಳ್ಳಾರಿ, ಪಕ್ಷದ ಮುಖಂಡರಾದ ವಿರೇಶ್‌ಮಹಾಂತಯ್ಯನಮಠ್, ರಾಜು ಹಲಗೇರಿ, ಕೋಟ್ರಪ್ಪ ಕೋರ್ಲಳ್ಳಿ, ಎಂ.ಡಿ.ಹುಸೇನ ಮಾಸ್ಟರ್, ನಗರ ಸಭೆ ಸದಸ್ಯರಾದ ಚನ್ನಪ್ಪ ಕೋಟ್ಯಾಳ್, ಖಾಜಾವಲಿ ಬನ್ನಿಕೊಪ್ಪ, ನಗರ ಯುವ ಘಟಕದ ಅಧ್ಯಕ್ಷ ಸೈಯದ್ ಮಹೆಮುದ್ ಹುಸೇನಿ, ಟಿ.ಟಿ. ಪಾಟೀಲ್, ಸಿದ್ದಾರಡ್ಡಿ ಡಂಬ್ರಳ್ಳಿ, ಇಸೂಫ್‌ಖಾನ್, ಹನುಮಂತಪ್ಪ ಹೀರೆಸಿಂದೋಗಿ,  ದೇವೆಂದ್ರಪ್ಪ, ಭಾಗ್ಯನಗರದ ಮಂಜುನಾಥ ಶ್ಯಾವಿ, ಮಂಜುನಾಥ್ ಗಡ್ಡದ್, ವೆಂಕಟೇಶ ಬೆಲ್ಲದ್, ಅಮರೇಶ ಮುರುಳಿ, ವಿಜಯಕುಮಾರ ಬಿಸರಳ್ಳಿ, ಪ್ರಭು ಬಬ್ಲಿ ಸೇರಿದಂತೆ ಪಕ್ಷದ ಇತರ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

0 comments:

Post a Comment